ಕುಕ್ಕೆ ಸುಬ್ರಹ್ಮಣ್ಯ : ವೀಕೆಂಡ್, ರಜೆ ಹಿನ್ನೆಲೆ

0

ಕುಮಾರ ಪರ್ವತ ಚಾರಣಕ್ಕೆ ಹೆಚ್ಚಿದ ಪ್ರವಾಸಿಗರು

ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಅಭಿಪ್ರಾಯ; ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ

ವೀಕೆಂಡ್, ರಜೆ ಇದ್ದ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತದ ಚಾರಣಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸಿರುವುದು ಕಂಡು ಬಂದಿದೆ.

ಜನರು ಚಾರಣಕ್ಕೆ ತೆರಳಲು ಸಿದ್ಧವಾಗಿರುವ ವಿಡಿಯೋ ಕ್ಲಿಪ್ಪಿಂಗ್ ಒಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದು ಈ ಕುರಿತು ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇಲ್ಲಿ ನಿರ್ದಿಷ್ಟ ಜನರು ಹೋಗುವಂತೆ ಟೋಕನ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದು, ವನ್ಯ ಜೀವಿಗಳು ಹಾಗೂ ವನ್ಯ ಸಂಪತ್ತು ಹೊಂದಿರುವ ಈ ಸುಂದರವಾದ ಪರ್ವತ ಪರಿಸರ ಹಾಳು ಮಾಡದಂತೆ ಒತ್ತಾಯಿಸಿದ್ದಾರೆ. ಹಾಗಾಗಿ ಈ ಕಡೆ ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳುವಂತೆ ಜನರ ಅಭಿಪ್ರಾಯ ಕೇಳಿ ಬರುತ್ತಿದೆ.