














ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಲೆಕ್ಕಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಡಗನ್ನೂರು ಗ್ರಾಮದ ಉಲಯ ಮನೆ ಪರಮೇಶ್ವರಿಯವರು ಫೆ.02 ರಂದು ಅಸೌಖ್ಯದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 61 ವರ್ಷ ಪ್ರಾಯವಾಗಿತ್ತು.
ಬೆಳ್ಳಾರೆ ಗ್ರಾಮದ ನಿವಾಸಿಯಾಗಿದ್ದ ಅವರನ್ನು ಬಡಗನ್ನೂರಿನ ಬಾಲಕೃಷ್ಣರಿಗೆ ಮದುವೆ ಮಾಡಿಕೊಡಲಾಗಿತ್ತು.
ಬೆಳ್ಳಾರೆ ಮಂಡಲ ಪಂಚಾಯತ್ ಕಚೇರಿಗೆ ತಾತ್ಕಾಲಿಕ ಉದ್ಯೋಗಿಯಾಗಿ ಸೇರಿದ್ದ ಅವರು ಬಳಿಕ ಸೇವೆ ಖಾಯಮಾತಿಗೊಂಡು ಕೊಡಿಯಾಲ ಗ್ರಾಮ ಪಂಚಾಯತ್ ಉದ್ಯೋಗಿಯಾಗಿದ್ದರು.
ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ಸುಮಾರು 18 ವರ್ಷಗಳ ಕಾಲ ಕ್ಲರ್ಕ್ ಕಂ.ಬಿಲ್ಲು ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ನಂತರ ಲೆಕ್ಕಸಹಾಯಕರಾಗಿ ಭಡ್ತಿಗೊಂಡು ಕೆದಂಬಾಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದರು.
ಮೃತರು ಪತಿ ಬಾಲಕೃಷ್ಣ,ಪುತ್ರಿ ನವ್ಯ,ಪುತ್ರ ಶರತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









