ಪೆರಾಜೆ : ಕೊಕ್ಕೋ ಪ್ರೂನಿಂಗ್ ಮತ್ತು ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ

0

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ರೈತ ಸದಸ್ಯರ ತೋಟಗಳಲ್ಲಿ ಕೊಕ್ಕೋ ಪ್ರೂನಿಂಗ್ (ಸವರುವಿಕೆ) ಮತ್ತು ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಬಿ. ವಹಿಸಿದ್ದರು. ಕ್ಯಾoಪ್ಕೋ ಸಂಸ್ಥೆಯ ಸಿಬ್ಬಂದಿ ಚಂದ್ರಶೇಖರ ಕೆ. ವಿಷಯದ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪಿ.ಎಂ., ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಳ್ಳಡ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ
ನಿಡ್ಯಮಲೆ, ಸಂಘದ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಂಘದ ರೈತ ಸದಸ್ಯರು ಉಪಸ್ಥಿತರಿದ್ದರು.


ಪೆರಾಜೆ ಗ್ರಾಮದ ಅಡ್ಕದ ಐನ್ ಮನೆ ವಠಾರ, ಕುಶಾಲಪ್ಪ ಅಡ್ಕ ಹಾಗೂ ನಂದಕುಮಾರ್ ಅಡ್ಕ, ತಿರುಮಲೇಶ್ವರಿ ಬೊಮ್ಮನಮನೆ ಹಾಗೂ ಗಣಪಯ್ಯ, ಭಾಸ್ಕರ ದೊಡ್ಡಡ್ಕ ರವರ ತೋಟದಲ್ಲಿ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ರೈತ ಸದಸ್ಯರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.