ಸುಳ್ಯ ತಾಲೂಕಿನಿಂದ ನಿರ್ಗಮಿಸಿದ ಸಂಚಾರಿ ಕಾಡಾನೆ

0

ಅನೇಕ ವರ್ಷಗಳಿಂದ ಕುದುರೆಮುಖ ರಕ್ಷಿತಾರಣ್ಯದಿಂದ ಭಾಗಮಂಡಲ ರಕ್ಷಿತಾರಣ್ಯಕ್ಕೆ ಸಂಚರಿಸುತ್ತಿರುವ ಒಂಟಿ ಸಲಗ(ಕಾಡಾನೆ) ಮತ್ತೆ ವಾಸಸ್ಥಾನಕ್ಕೆ ಮರಳುತ್ತಿದೆ.

ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಸಂಚರಿಸಿ ಒಂಟಿ ಸಲಗ ಸುದ್ದಿಯಾಗಿತ್ತು.

ಫೆ.4 ರಂದು ರಾತ್ರಿ ಬಂಟಮಲೆ ಅರಣ್ಯ ಪ್ರದೇಶದಿಂದ ಪಂಬೆತ್ತಾಡಿ, ಪಂಜ ಬೀಡು ಮೂಲಕ ಕರಿಕ್ಕಳದಲ್ಲಿ ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ದಾಟಿ . ಪಂಜದ ಗಾಳಿಬೀಡು,ಚಿಂಗಾಣಿಗುಡ್ಡೆ ಅಳ್ಪೆ,ಪೊಳೆಂಜ,ಬೊಳ್ಳಾಜೆ ಮೊದಲಾದೆಡೆ ಸಂಚರಿಸಿ ಎಣ್ಮೂರು ರಕ್ಷಿತಾರಣ್ಯದ ಪುಳಿಕುಕ್ಕು ಕಾಡಿನಲ್ಲಿ ಉಳಿದಿತ್ತು.

ಫೆ.5 ರಂದು ರಾತ್ರಿ ಪಂಜ -ಕಡಬ ರಸ್ತೆ ದಾಟಿ ಕಡಬ, ಕುಟ್ರುಪ್ಪಾಡಿ ಗ್ರಾಮಗಳಲ್ಲಿ ಸಾಗಿ ಇಚ್ಲಂಪಾಡಿ ಗ್ರಾಮದ ಮಡಿಪ್ಪುನಲ್ಲಿ ಹೊಳೆ ದಾಟಿ ಕಲ್ಲಬ೯‌ಎಂಬಲ್ಲಿ ಪಡ್ನೂರು ಮೀಸಲು ಅರಣ್ಯದಲ್ಲಿ ಉಳಿದಿರುವುದಾಗಿ ತಿಳಿದು ಬಂದಿದೆ.

ಆನೆಯ ಚಲನವಲನ ಬಗ್ಗೆ ಪಂಜ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅನೇಕ ದಿನಗಳಿಂದ ಗಸ್ತುನಲ್ಲಿದರು.