ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ಮಲ್ಲಿಕಾ ಆಚಾರಿಗದ್ದೆ ಅವರಿಗೆ ಬಹುಮಾನ

0

ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆ. 2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಐನೆಕಿದು ಗ್ರಾಮದ ಆಚಾರಿಗದ್ದೆ ಶ್ರೀಮತಿ ಮಲ್ಲಿಕಾ.ಜೆ. ಬಹುಮಾನ ಗಳಿಸಿದ್ದಾರೆ.

5 ಕಿ.ಮೀ ವೇಗದ ನಡಿಗೆಯಲ್ಲಿ ಪ್ರಥಮ, 1500 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಇವರು ಭಾಗವಹಿಸಲಿದ್ದಾರೆ. ಪ್ರಸ್ತುತ ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿರುವ ಇವರು ಐನೆಕಿದು ಗ್ರಾಮದ ಆಚಾರಿಗದ್ದೆ ಯೋಗೀಶ್. ಎ.ಎಂ ರವರ ಪತ್ನಿ.