ಹಿರಿಯರ ಕ್ರೀಡಾಕೂಟ: ನೇತ್ರಾವತಿ ಹೊಪ್ಪಾಳೆ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ

0

ವೆಸ್ಟರನ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆ. 2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಬಳ್ಪ ಗ್ರಾಮದ ಶ್ರೀಮತಿ ನೇತ್ರಾವತಿ ಹೊಪ್ಪಾಳೆಯವರು ಭಾಗವಹಿಸಿ 4×400ಮೀ ರಿಲೇಯಲ್ಲಿ ಪ್ರಥಮ, 4×100 ಮೀ ರಿಲೇ, ಲಾಂಗ್ ಜಂಪ್, 100 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಮತ್ತು 100 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಹೊಪ್ಪಾಳೆ ಗಣೇಶ್ ಪೂಜಾರಿಯವರ ಪತ್ನಿಯಾಗಿರುವ ಇವರು ಬಳ್ಪ ಗ್ರಾ.ಪಂ. ಸದಸ್ಯೆ.