ಅರಂತೋಡು : ಕ್ಲಾಸಿಕ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ದಿ|ಪ್ರತಿಕ್ ಬೊಳ್ಳುರು ಸ್ಮರಣಾರ್ಥ ಮೊದಲನೇ ವರ್ಷದ ” ಕ್ಲಾಸಿಕಲ್ ಟ್ರೋಫಿ 2024″ ಕ್ರಿಕೆಟ್ ಪಂದ್ಯಾಟ

0

ಕ್ಲಾಸಿಕ್ ಸ್ಪೋಟ್ಸ್ ಕ್ಲಬ್ ಅರಂತೋಡು ಆಶ್ರಯದಲ್ಲಿ ದಿ|ಪ್ರತಿಕ್ ಬೊಳ್ಳುರು ಅವರ ಸ್ಮರಣಾರ್ಥ ಮೊದಲನೇ ವರ್ಷದ ಮುಕ್ತ ಏಳು ಜನರ ಅಂಡರ್ ಆರ್ಮ್ ಸೂಪರ್ ಸಿಕ್ಸ್ ” ಕ್ಲಾಸಿಕಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ” ಅರಂತೋಡು ಎನ್ . ಎಂ.ಪಿಯು ಕಾಲೇಜಿನಲ್ಲಿ ಇಂದು ನಡೆಯಿತು.

ಪಂದ್ಯಾಟ ಕಾರ್ಯಕ್ರಮದ ಉದ್ಘಾಟನೆಯನ್ನು ತೆಂಗಿನ ಕಾಯಿ ಹೊಡೆಯುವ ಮೂಲಕ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಏ.ಸಿ ವಸಂತ ನಿರ್ವಹಿಸಿದರು. ಬಳಿಕ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಈ ವೇಳೆ ಅರಂತೋಡು ಕೃಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ಉಪ್ಪಿನಂಗಡಿ ಗ್ರಾಂ ಪಂ. ಕಾರ್ಯದರ್ಶಿ ಗೀತಾ ಶೇಖರ್ ಉಳುವಾರು, ಕ್ಲಾಸಿಕಲ್ ಸ್ಪೋಟ್ಸ್ ಕ್ಲಬ್ ಅರಂತೋಡು ಅಧ್ಯಕ್ಷ ಬಿಪಿನ್ ಜೆತ್ತನಮನೆ ಅಮೆಚೂರು, ಪವನ್ ಎಂ. ಬಿ ,ಹಿತೇಶ್ ಗುಡ್ಡೆಮನೆ, ಕೌಶಿಕ್ ಪೆರಾಜೆ , ಸರ್ವ ಸದಸ್ಯರು ಹಾಗೂ ವಿವಿಧ ಕ್ರಿಕೆಟ್ ತಂಡಗಳ ಆಟಗಾರರು ಮತ್ತು , ಗ್ರಾಮಸ್ಥರು ಉಪಸ್ಥಿತರಿದ್ದರು.