ಕೊಯಿಕುಳಿ ಹಿ.ಪ್ರಾ. ಶಾಲೆಗೆ ಗಣಿತ ಶಿಕ್ಷಕಿಯಾಗಿ ದರ್ಖಾಸ್ತು ಶಾಲೆಯ ಸಹಶಿಕ್ಷಕಿ ಪಲ್ಲವಿ ಪಿ. ನಿಯೋಜನೆ

0

ದುಗ್ಗಲಡ್ಕದ ಕೊಯಿಕುಳಿ ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ ಶಿಕ್ಷಕಿಯಾಗಿ ದರ್ಖಾಸ್ತು ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ಶ್ರೀಮತಿ ಪಲ್ಲವಿ ಪಿ. ಅವರನ್ನು ನಿಯೋಜಿಸಲಾಗಿದೆ. ಕೊಯಿಕುಳಿ ಹಿ. ಪ್ರಾ. ಶಾಲೆಗೆ ಖಾಯಂ ಶಿಕ್ಷಕರಿಲ್ಲದೆ ಗಣಿತ ಪಾಠವನ್ನು ಮಾಡಲು ಶಿಕ್ಷಕರ ಕೊರತೆಯಾಗಿತ್ತು. ಆದುದರಿಂದ ಶಾಲೆಗೆ ಗಣಿತ ಶಿಕ್ಷಕರನ್ನು ಒದಗಿಸುವಂತೆ ಜ.23ರಂದು ಸುಳ್ಯದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಜನತಾದರ್ಶನದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಎಂ. ಜೆ.ಸಚಿವರಿಗೆ ಮನವಿ ಸಲ್ಲಿಸಿದರು.

ಈ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಶಿಕ್ಷಣ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶ್ರೀಮತಿ ಪಲ್ಲವಿಯವರನ್ನು ಡೆಪ್ಯುಟೇಷನ್ ನೆಲೆಯಲ್ಲಿ ಕೊಯಿಕುಳಿ ಶಾಲೆಗೆ ನಿಯೋಜಿಸಿದ್ದಾರೆ.