ಅಜ್ಜಾವರ ಮೂರ್ತೆದಾರರ ಸೇವಾ ಸಹಕಾರ ಸಂಘ

0

ಅಧ್ಯಕ್ಷರಾಗಿ ರಾಮಣ್ಣ ಪೂಜಾರಿ ಪೊಡುಂಬ, ಉಪಾಧ್ಯಕ್ಷರಾಗಿ ಸೀತಾರಾಮ ಕೊಲ್ಲರಮೂಲೆ

ಅಜ್ಜಾವರ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಣ್ಣ ಪೂಜಾರಿ ಹಾಗೂ ಉಪದಾಧ್ಯಕ್ಷರಾಗಿ ಸೀತಾರಾಮ ಕೊಲ್ಲರಮೂಲೆ ಆಯ್ಕೆಯಾದರು.


ಸಂಘದ 13 ಮಂದಿ ನಿರ್ದೇಶಕ ಸ್ಥಾನಕ್ಕೆ 9 ನಾಮಪತ್ರಗಳು ಸಲ್ಲಿಕೆಯಾಗಿದ್ದು ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫೆ.6ರಂದು ಸುಳ್ಯದ ಜಟ್ಟಿಪಳ್ಳದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಶಿವಲಿಂಗಯ್ಯ ಪ್ರಕ್ರಿಯೆ ನಡೆಸಿಕೊಟ್ಟರು.


ಅಧ್ಯಕ್ಷರಾಗಿ ರಾಮಣ್ಣ ಪೂಜಾರಿ ಪೊಡುಂಬ, ಉಪಾಧ್ಯಕ್ಷರಾಗಿ ಸೀತಾರಾಮ ಕೊಲ್ಲರಮೂಲೆ, ನಿರ್ದೇಶಕರುಗಳಾಗಿ ಆರ್ ಸುಭಗನ್ ಹಳೆಗೇಟು, ಎ.ಎಂ.ಶಾಜಿ ಸಂಪಾಜೆ, ರಾಜೇಶ್ ಆಲೆಟ್ಟಿ, ದಿವಾಕರ ಗೂನಡ್ಕ, ವೇಣು ಕಲ್ಲುಗುಂಡಿ, ಜಯಕುಮಾರ್ ಅಡ್ಕಾರು, ಬಾಲಚಂದ್ರ ಪೂಜಾರಿ ಕನಕಮಜಲು ಆಯ್ಕೆಯಾಗಿದ್ದಾರೆ.