ಸುಳ್ಯ : ಇಂಗ್ಲಿಷ್ ಸಂವಹನ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

0

ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಸಂವಹನ‌ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವು ಅನುದಾನಿತ ಮತ್ತು ಸರಕಾರಿ ಪ್ರಾಥಮಿಕ ಶಾಲೆಯ ತಾಲೂಕಿನ ಆರು ಕ್ಲಸ್ಟರ್ ನ ಶಿಕ್ಷಕರಿಗೆ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಳ್ಯದಲ್ಲಿ 2024 ಫೆ 5 ರಂದು ಉದ್ಘಾಟನೆಗೊಂಡಿತು.
ಮಾತೃ ಭಾಷೆಯ ಜೊತೆಗೆ‌ ಇಂಗ್ಲಿಷ್ ಭಾಷೆಯು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಭಾಷೆಯಾಗಿದೆ ಎಂದು ಕಾರ್ಯಾಗಾರ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಯುತ ರಮೇಶ್ ಬಿ.ಇ ಇವರು ಮಾತನಾಡಿದರು.

ಶ್ರೀಮತಿ ಶೀತಲ್ ಯು ಕೆ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು..ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಉದಯ್ ಕೋಟ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಇವರು ಉಪಸ್ಥಿತರಿದ್ದು ಶಿಕ್ಷಕರಿಗೆ ಇಂಗ್ಲಿಷ್ ‌ಭಾಷೆಯ‌ ಉದ್ದೇಶ‌ ಮತ್ತು ಕಾರ್ಯಾಗಾರದ ಮಹತ್ವವನ್ನು ತಿಳಿಸಿ ಚಟುವಟಿಕೆಗಳನ್ನು ಮಾಡಿಸಿದ್ದರು. ಸೈಂಟ್ ಬ್ರಿಜಿಡ್ಸ್
ಶಾಲೆಯ ಮುಖ್ಯ ಶಿಕ್ಷಕಿ ಸಿ| ಆಂಟೋನಿ ಮೇರಿ ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಮತಾ ಪಡ್ಡಂಬೈಲು ಸಮೂಹ ಸಂಪನ್ಮೂಲ ವ್ಯಕ್ತಿ ಸುಳ್ಯ ಇವರು ವಂದಿಸಿದರು.
ಶ್ರೀಯುತ ಪದ್ಮನಾಭ ಅತ್ಯಾಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ , ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ದೇವರಾಜ್ ಎಸ್. ಉಪಸ್ಥಿತರಿದ್ದರು.