ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ಕಸಬಾದ ಶಾಂತಿನಗರ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ (ಮಡಪ್ಪುರ) ದ ನೇಮೋತ್ಸವವು ಮಾ.9 ಮತ್ತು 10 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ದೈವಸ್ಥಾನದ ವಠಾರದಲ್ಲಿ ಫೆ.8 ರಂದು ನಡೆಯಿತು.
ದೈವಸ್ಥಾನದ ಮೊಕ್ತೇಸರ ರಾಮಕೃಷ್ಣ ಎಸ್.ಎನ್,ಮುತ್ತಪ್ಪ ದೈವರಾಧನಾ ಸಮಿತಿ ಅಧ್ಯಕ್ಷಪಿ.ಎಂ.
ಮಧುಸೂದನ ಹಾಗೂ ಸದಸ್ಯರು, ಉತ್ಸವ ಸಮಿತಿ ಅಧ್ಯಕ್ಷ ನವೀನ್ ನಾಯಕ್ ಹಾಗೂ ಸದಸ್ಯರು ಮತ್ತು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.