ಬಾಳುಗೋಡಿನ ನೆಟ್ವರ್ಕ್ ಸಮಸ್ಯೆಗೆ ಬಿ.ಎಸ್.ಎನ್.ಎಲ್ ಆಸರೆ

0

ಗ್ರಾಮದ ಬಹು ಬೇಡಿಕೆಯ ವ್ಯವಸ್ಥೆ ಗೆ ಮುನ್ನುಡಿ

ತಾಲೂಕು ಕೇಂದ್ರದಿಂದ ಬಹುದೂರದ ಕಟ್ಟ ಕಡೆಯ ಗ್ರಾಮವೆನ್ನಬಹುದಾದ ಬಾಳುಗೋಡು ಗ್ರಾಮದ
ಬಹುಕಾಲದ ಬೇಡಿಕೆಯ ನೆಟ್ವರ್ಕ್ ಸಮಸ್ಯೆಗೆ ಇನ್ನು ಕೆಲವೇ ದಿನಗಳಲ್ಲಿ ಈಡೇರಲಿದೆ.ಅದಕ್ಕಾಗಿ
ನೂತನವಾಗಿ ನಿರ್ಮಾಣವಾಗಲಿರುವ ಬಿಎಸ್ಎನ್ಎಲ್ ಮೊಬೈಲ್ ಟವರ್ ನ ಕಾಮಗಾರಿಗೆ ಫೆ.6 ರಂದು ಭೂಮಿ ಪೂಜೆ ನಡೆಸಲಾಯಿತು.

ಹಲವು ವರ್ಷದಿಂದ ರಸ್ತೆ ಮತ್ತು ನೆಟ್ವರ್ಕ್ ಸಮಸ್ಯೆ ಈ ಭಾಗದವರನ್ನು ಕಾಡಿದ ಬಹುದೊಡ್ಡ ಬೇಡಿಕೆಗಳು. ಮುಖ್ಯ ರಸ್ತೆ ಬಹುತೇಕ ಅಭಿವೃದ್ಧಿ ಗೊಂಡಂತಾಗಿದೆ. ನೆಟ್ವರ್ಕ್ ಸಮಸ್ಯೆಯೂ ಪರಿಹಾರವಾಗುವ ಕಾಲ ಕೂಡಿ ಬಂದಿರುವುದು ಈ ಭಾಗದವರಿಗೆ ಹರ್ಷ ಉಂಟುಮಾಡಿದೆ.
ಹರಿಹರ ಪಲ್ಲತಡ್ಕ ಗ್ರಾ.ಪಂ
ಉಪಾಧ್ಯಕ್ಷರಾದ ಜಯಂತ ಬಾಳುಗೋಡು ಭೂಮಿ ಪೂಜೆ ನೆರವೇರಿಸಿದರು. ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಚಂದ್ರಹಾಸ ಶಿವಾಲ ಗ್ರಾಮಸ್ಥರು ಉಪಸ್ಥಿತರಿದ್ದರು. ಫೆ. 7 ರಂದು ಶಾಸಕಿ ಭಾಗೀರಥಿ ಅವರು ಸ್ಥಳ ಕ್ಕೆ ಭೇಟಿ ನೀಡಿದರು.