ಫೆ.18-20: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವ

0

ಫೆ.12ರಂದು ದೇವಸೇನ ನಾಯಕನ ಜಾತ್ರೋತ್ಸವಕ್ಕೆ ಗೊನೆಮುಹೂರ್ತ

ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಫೆ. 18ರಿಂದ ಫೆ.20ರ ವರೆಗೆ ಜರುಗಲಿದ್ದು, ದೇವಸೇನ ನಾಯಕನ ಜಾತ್ರೋತ್ಸವಕ್ಕೆ ಫೆ.12ರಂದು ಗೊನೆ ಮುಹೂರ್ತ ನಡೆಯಲಿದೆ.

ಫೆ.18ರಂದು ಪೂರ್ವಾಹ್ನ 8ರಿಂದ ಸಂಜೆ 7ರವರೆಗೆ ನಿರಂತರವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದ್ದು, ಬೆಳಿಗ್ಗೆ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ, ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರ, ಪೈಚಾರು, ಬೊಳುಬೈಲು, ಪೇರಾಲು -ಅಂಬ್ರೋಟಿ ರಾಮ ಭಜನಾ ಮಂದಿರಗಳಿಂದ ಹಸಿರುವಾಣಿ ಮೆರವಣಿಗೆಯು ವಿವಿಧ ವಾಹನಗಳ ಮೂಲಕ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಗೆ ಸಾಗಿ ಬರಲಿದ್ದು, ಬಳಿಕ ಉಗ್ರಾಣ ತುಂಬಿಸಲಾಗುವುದು.

ಮಧ್ಯಾಹ್ನ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ದೇವರ ಮಹಾಪೂಜೆ ಜರುಗಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ‘ತುಳುನಾಡ ವೈಭವ’ ಜರುಗಲಿದ್ದು, ರಾತ್ರಿ ಮೈಸೂರಿನ ಗುರುದೇವ ಲಲಿತಕಲಾ ಅಕಾಡೆಮಿಯ ಡಾ. ಚೇತನ ರಾಧಾಕೃಷ್ಣ ಮೂರ್ಜೆ ಅವರಿಂದ ‘ಶಾಸ್ತ್ರೀಯ ನೃತ್ಯ ವೈಭವ’ ನಡೆಯಲಿದೆ.

ಫೆ.19ರಂದು ಬೆಳಿಗ್ಗೆ ಗಣಪತಿ ಹವನ, ಸುಬ್ರಹ್ಮಣ್ಯ ಹವನದ ಸಂಕಲ್ಪ, ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಪರಿವಾರ ದೇವರಿಗೆ ತಂಬಿಲ, ಮಧ್ಯಾಹ್ನ ಸುಬ್ರಹ್ಮಣ್ಯ ಹವನದ ಪೂರ್ಣಾಹುತಿ, ದೇವರಿಗೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.
ಸಂಜೆ ದೀಪಾರಾಧನೆ, ತಾಯಂಬಕ, ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ, ಪಟ್ಟಣ ಸವಾರಿ, ನೃತ್ಯಬಲಿ, ವಸಂತಕಟ್ಟೆ ಪೂಜೆ, ಬೆಡಿಸೇವೆ, ಅನ್ನಸಂತರ್ಪಣೆ ಜರುಗಲಿದೆ.

ಫೆ.20ರಂದು ಪೂರ್ವಾಹ್ನ ಶ್ರೀ ದೇವರ ಉತ್ಸವ ಬಲಿ , ದರ್ಶನ ಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರುಗಲಿದ್ದು , ಸಂಜೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಮಂಗಳೂರಿನ ಸಾಯಿಶಕ್ತಿ ಕಲಾ ಬಳಗದವರಿಂದ ತುಳು ಪೌರಾಣಿಕ ನಾಟಕ “ಬೊಳ್ಳಿಮಲೆತ ಶಿವಶಕ್ತಿಲು” ಪ್ರದರ್ಶನಗೊಳ್ಳಲಿದೆ.