ಗುತ್ತಿಗಾರಿನಲ್ಲಿ ಭೀಕರ ಅಪಘಾತ

0

ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಮೃತ್ಯು

ಗುತ್ತಿಗಾರಿನ ಬಾಕಿಲ ಎಂಬಲ್ಲಿ ಸ್ಕೂಟಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.

ಗುತ್ತಿಗಾರು ಬಾಕಿಲ ಎಂಬಲ್ಲಿ ಗುತ್ತಿಗಾರಿನಿಂದ ಸುಳ್ಯ ಕಡೆ ಬರುತ್ತಿದ್ದ ನಾಲ್ಕೂರಿನ ಶಿವರಾಮರು ಚಲಾಯಿಸುತ್ತಿದ್ದ ಸ್ಕೂಟಿಗೆ ಎದುರುನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿ ಶಿವರಾಮರನ್ನು ತುಂಬಾ ದೂರ ಎಳೆದುಕೊಂಡು ಹೋಯಿತು.

ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಇದೀಗ ಗಾಯಾಳು ಮೃತಪಟ್ಟರೆಂದು ತಿಳಿದು ಬಂದಿದೆ. ಸ್ಕೂಟಿಯಲ್ಲಿ ಅವರ ಪುತ್ರಿಯೂ ಇದ್ದು, ಆಕೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.