ಕೇರ್ಪಳದಲ್ಲಿ ಗಾಯಗೊಂಡು‌ ಬಿದ್ದಿದ್ದ ಪುನುಗು ಬೆಕ್ಕಿಗೆ ಚಿಕಿತ್ಸೆ

0

ಸುಳ್ಯದ ಕೇರ್ಪಳದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿದ್ದ ಪುನುಗು ಬೆಕ್ಕಿಗೆ ಸುಳ್ಯ ಪಶುಸಂಗೋಪನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಫೆ.11ರಂದು‌ ಬೆಳಗ್ಗೆ ಕೇರ್ಪಳದ ರಸ್ತೆ ಬದಿಯಲ್ಲಿ ಪುನುಗು ಬೆಕ್ಕು‌ ಗಾಯಗೊಂಡು ಬಿದ್ದಿತ್ತು. ಇದನ್ನು ಗಮಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ‌ ಮಾಹಿತಿ ನೀಡಿದರು. ಫಾರೆಸ್ಟರ್ ಗಳಾದ ಕರಣಿಮಠ ಹಾಗೂ ಯಶೋಧರರು ಸ್ಥಳಕ್ಕೆ ಬಂದು ಆ ಬೆಕ್ಕನ್ನು ಸುಳ್ಯ ಪಶುಸಂಗೋಪನೆ ಆಸ್ಪತ್ರೆಗೆ ತಂದರು. ಅಲ್ಲಿ ಮುಖ್ಯವೈದ್ಯಾಧಿಕಾರಿ ಡಾ.ನಿತೀನ್ ಪ್ರಭುಗಳು ಚಿಕಿತ್ಸೆ ನೀಡಿದರೆಂದು ತಿಳಿದುಬಂದಿದೆ.