ಸುಬ್ರಹ್ಮಣ್ಯ ಗ್ರಾ.ಪಂ. ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಡಳಿತ ವೈಫಲ್ಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

0

ಯೇನೆಕಲ್ಲಿನಲ್ಲಿ ಜಾಥಾಕ್ಕೆ ಅಶೋಕ್ ನೆಕ್ರಾಜೆಯವರಿಂದ ಚಾಲನೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಗ್ರಾಮ ಪಂಚಾಯತ್ ಆಡಳಿತದಲ್ಲಿ ವಿಫಲವಾಗಿದೆಯೆಂದು ಆರೋಪಿಸಿ, ಕಾಂಗ್ರೆಸ್ಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಇಂದು ನಡೆಯುತ್ತಿದ್ದು, ಪ್ರತಿಭಟನಾ ಮೆರವಣಿಗೆಗೆ ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ ಯೇನೆಕಲ್ಲಿನಲ್ಲಿ ಚಾಲನೆ ನೀಡಿದರು.


ಪ್ರತಿಭಟನಾ ಜಾಥಾ ಸುಬ್ರಹ್ಮಣ್ಯದ ತನಕ ನಡೆಯಲಿದ್ದು, ಬಳಿಕ ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಲಿರುವುದಾಗಿ ತಿಳಿದುಬಂದಿದೆ.


ಕಾಂಗ್ರೆಸ್ ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪ್ರಮುಖರಾದ ಶಿವರಾಮ ರೈ, ವಿಮಲಾ ರಂಗಯ್ಯ, ಬಾಲಕೃಷ್ಣ ಮರೀಲ್, ರಾಮಯ್ಯ ಎಂಎಂ, ಕಾರ್ಯಪ್ಪ ಗೌಡ, ಅಚ್ಚುತ ಆಲ್ಕಬೆ, ಚಂದ್ರಕಾಂತ ಬಳ್ಪ, ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್ ಎಂ.ಡಿ, ಮನೋಹರ ನಾಳ, ಸುಧೀರ್ ತೋಟ, ಭಾರತಿ, ಸಂತೋಷ್ ರೈ ಪಲ್ಲತ್ತಡ್ಕ, ಶ್ರೀಮತಿ ಸೌಮ್ಯ, ರವೀಂದ್ರ ಕುಮಾರ್ ರುದ್ರಪಾದ, ಗೋಪಾಲ್ ಎಣ್ಣೆಮಜಲು, ಮೂರ್ತಿ ಭಟ್, ಶೇಷ ಕುಮಾರ್, ದಿನೇಶ್ ಎಣ್ಣೆಮಜಲು, ಮಾಧವ ಡಿ, ಗುಣವರ್ಧನ, ಮೋಹನ್ ದಾಸ್ ರೈ,ಮನೋಹರ ನಾಳ, ಸುಬ್ರಹ್ಮಣ್ಯ ರಾವ್, ಪುರುಷೋತ್ತಮ್ ಸೇರಿದಂತೆ ಅನೇಕ‌ ಕಾಂಗ್ರೆಸ್ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.