ಮಾ. 30ರಿಂದ ಅರ್ಗುಡಿ ದೇವಸ್ಥಾನದ ಬ್ರಹ್ಮ ಕಲಶ, ಆಮಂತ್ರಣ ಪತ್ರ ಅಭಿಯಾನದ ಉದ್ಘಾಟನೆ

0

ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮ ಕಲಶೋತ್ಸವವು ಮಾ. 30ರಿಂದ ಏ. 4 ರ ತನಕ ನಡೆಯಲಿದ್ದು, ಆಮಂತ್ರಣ ಪತ್ರ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.

ನಾಗೇಶ್ ಪಡಿಕ್ಕಿಲಾಯ ಮತ್ತು ಶ್ರೀಮತಿ ತುಳಸಿ ನಾಗೇಶ್ ದೀಪ ಬೆಳಗಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಇಂದು ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕಿನ ವಿವಿಧ ಭಾಗಗಳಲ್ಲಿ ತಂಡ ತಂಡವಾಗಿ ಸಂಚರಿಸಿ ಮನೆ ಮನೆಗೆ ಆಮಂತ್ರಣ ಪತ್ರ ಹಂಚುವ ಕಾರ್ಯ ನಡೆಯಲಿರುವುದಾಗಿ ಸಂಘಟಕರು ತಿಳಿಸಿದ್ದಾರೆ.