ಫೆ.24 – 26 : ಕೋಡ್ತೀಲು ನಿಸರ್ಗ ಕಾಲನಿಯಲ್ಲಿ ಶ್ರೀ ಮಹಾಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗುಳಿಗ ಮಹಾರಾಜ ದೈವಕ್ಕೆ ತಂಬಿಲ

0

ಐವರ್ನಾಡು ಗ್ರಾಮದ ಕೋಡ್ತಿಲು ನಿಸರ್ಗ ಕಾಲನಿಯಲ್ಲಿ ಶ್ರೀ ಮಹಾಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಶ್ರೀ ಗುಳಿಗ ಮಹಾರಾಜ ದೈವಕ್ಕೆ ತಂಬಿಲ ಸೇವೆ ಫೆ.25 ರಿಂದ ಫೆ.26 ರವರೆಗೆ ನಡೆಯಲಿದೆ. ಫೆ.17 ರಂದು ಗೊನೆ ಕಡಿಯಲಾಯಿತು.


ಫೆ.24 ರಂದು ಗಣಹೋಮ, ಸಂಜೆ ಗಂಟೆ 5.00 ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9.00 ಕ್ಕೆ ಭಂಡಾರ ತೆಗೆಯುವುದು ನಂತರ ಮಾರಿಕಳ ನಡೆಯಲಿದೆ.


ಫೆ.25 ರಂದು ಪ್ರಾತ: ಕಾಲ 2.00 ಗಂಟೆಗೆ ಮಾರಿಕಳದಲ್ಲಿ ಬಿಂದು ಆವರಣೆ,ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ.26 ರಂದು ಬೆಳಿಗ್ಗೆ ಗಂಟೆ 8.00 ಗುಳಿಗ ಮಹಾರಾಜ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ ಎಂದು ದೈವಸ್ಥಾನದ ಅಧ್ಯಕ್ಷ ಕೆ.ರಾಘವರವರು ತಿಳಿಸಿದ್ದಾರೆ.