ಸುಳ್ಯ: ಸ್ವರ ಮಾಧುರ್ಯ ಸಂಗಮದ ವತಿಯಿಂದ ಮ್ಯೂಸಿಕಲ್ ಈವೆಂಟ್

0

ಸುಳ್ಯದ ಉಡುಪಿ ಗಾರ್ಡನ್ ನಲ್ಲಿ ಸ್ವರ ಮಾಧುರ್ಯ ಸಂಗಮ ಮ್ಯೂಸಿಕಲ್ ಈವೆಂಟ್ ಸೀಸನ್ 1 ಫೆ.11ರಂದು ನಡೆಯಿತು. ವಿವಿಧ ಜಿಲ್ಲೆಯ 46 ಗಾಯಕರು ಹಾಡಿ ಜನರನ್ನು ರಂಜಿಸಿದರು. ಉತ್ತಮವಾಗಿ ಹಾಡು ಹಾಡಿದ ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಿದ ಮೂವರು ಗಾಯಕರು ಚಿತ್ರ ತಂಡವೊಂದಕ್ಕೆ ಆಯ್ಕೆಯಾದರು.

ಈ ಕಾರ್ಯಕ್ರಮವನ್ನು ಸುಳ್ಯದ ಗಾಯಕರುಗಳಾದ ಶೋಭಾ ಬೆಳ್ಳಾರೆ , ಉದಯ್ ಕುಮಾರ್ ಬಾಯಾರು, ವಿಜಯ್ ಹಳೆಗೇಟು, ಸೂರಜ್ ಬೆಳ್ಳಾರೆ , ಸಂದೀಪ್ ಸುಳ್ಯ ,ಚಂದ್ರಕಲಾ ಸುಳ್ಯ ಆಯೋಜಿಸಿದ್ದರು.