ಫೆ. 28: ಲ್ಯಾಂಪ್ ಸೊಸೈಟಿಯ ಬಡ್ಡಡ್ಕ ಶಾಖೆಯ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನೆ

0

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆಲೆಟ್ಟಿ ಗ್ರಾಮದ ಬಡ್ಡಡ್ಕ ಶಾಖೆಯ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಫೆ. 28ರಂದು ಬೆಳಿಗ್ಗೆ 11.00 ಗಂಟೆಗೆ ನಡೆಯಲಿದೆ.


ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಗೋದಾಮು ಉದ್ಘಾಟನೆ ಮಾಡಲಿದ್ದಾರೆ. ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಮಾರಾಟ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಜಿ.ಪಂ. ಸದಸ್ಯ ದೇವಪ್ಪ ನಾಯ್ಕ ಜಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಹೆಚ್.ಎನ್. ರಮೇಶ್, ಮಂಜುನಾಥ ಎನ್.ಎಸ್, ಸತ್ಯ ಕುಮಾರ್ ಆಡಿಂಜ, ತ್ರಿವೇಣಿ ರಾವ್, ಮಂಜುನಾಥ ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಹರೀಶ್ ಮೆದು, ಶಿವರಾಮ ನಾಯ್ಕ ಕಾಪುಮಲೆ, ವಿಮಲಾಕ್ಷಿ ಟಿ ಭಾಗವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷ ಬಾಳೆಗುಡ್ಡೆ ಕುಂಞಣ್ಣ ನಾಯ್ಕ ಮತ್ತು ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಡಿ ಮತ್ತು ಸಿಬ್ಬಂದಿಗಳು ಸಹಕಾರ ನೀಡಲಿದ್ದಾರೆ.