ಸುಬ್ರಹ್ಮಣ್ಯ : ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದ ವಾರ್ಷಿಕ ಮಹಾಸಭೆ

0

ಓಂಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ವಾರ್ಷಿಕ ಮಹಾ ಸಭೆ ಫೆ.28 ರಂದು ಪಂಚಾಯತ್ ನ ಕುಮಾರ ಧಾರ ಸಭಾಂಗಣ ದಲ್ಲಿ ಒಕ್ಕೂಟ ದ ಅಧ್ಯಕ್ಷರಾದ ಸುಜಾತ ಜಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಕಡಬ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಜಗತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಕಲ್ಲಾಜೆ, ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ, ಉಪಾಧ್ಯಕ್ಷೆ ರಮಣಿ, ಪಂಚಾಯತ್ ಸದಸ್ಯೆ ಸೌಮ್ಯ, ಭಾರತಿ ದಿನೇಶ್,ಒಕ್ಕೂಟ ದ ಪದಾಧಿಕಾರಿಗಳು ಸಂಘಗಳ ಸದಸ್ಯೆಯರು,ಉಪಸ್ಥಿತರಿದ್ದರು.ಕಾರ್ಯಕ್ರಮ ವ್ಯವಸ್ಥಾಪಕರು ಮಾತನಾಡಿ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯೆಯರಿಗೆ ಸ್ವ ಉದ್ಯೋಗ ಮಾಡಲು ಸಿಗುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

ಸ್ವ ಸಹಾಯ ಸಂಘದ ಸದಸ್ಯೆಯರಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ರತ್ನಕುಮಾರಿ ನಿರೂಪಣೆ ಮಾಡಿದರು. ಜಯಂತಿ ಭಟ್ ಪ್ರಾರ್ಥನೆ ಮಾಡಿದರು. ಎಂ.ಬಿ.ಕೆ ಹೇಮಾವತಿ ಸ್ವಾಗತಿಸಿ, ವಾರ್ಷಿಕ ವರದಿ ಯನ್ನು ಮೀನಾಕ್ಷಿ ಓದಿದರು, ಲೆಕ್ಕ ಪರಿಶೋಧನೆ ವರದಿಯನ್ನು ಬಿ.ಸಿ ಸಖಿ ತ್ರಿವೇಣಿ ದಾಮ್ಲೆ ಓದಿದರು. ವಂದನಾರ್ಪಣೆ ಎಲ್.ಸಿ.ಆರ್. ಪಿ.ಕವಿತ ವಂದಿಸಿದರು.