ಕೆವಿಜಿ ಸಮೂಹ ಸಂಸ್ಥೆಗಳು, ಇನ್ನರ್ ವ್ಹಿಲ್ ಕ್ಲಬ್ ಸುಳ್ಯ ಆಶ್ರಯದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಕೆವಿಜಿ ಸಮೂಹ ಸಂಸ್ಥೆಗಳು, ಇನ್ನರ್ ವ್ಹಿಲ್ ಕ್ಲಬ್ ಸುಳ್ಯ ಹಾಗೂ ಶುಭಶ್ರೀ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಹಾಗು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಕಾರ್ಯಕ್ರಮವನ್ನು ಮಾ. 2ರಂದು ಸುಳ್ಯದ ಗಾಂಧಿನಗರದ ಅಂಗನವಾಡಿಯಲ್ಲಿ ಆಯೋಜಿಸಲಾಗಿತ್ತು.

ಶುಭಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಹರಪ್ರಸಾದ್ ಪ್ರಾಸ್ತಾವಿಕ ಭಾಷಣ ಮಾಡಿ ಇನ್ನರ್ ವ್ಹಿಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಸವಿತಾ ನಾರ್ಕೋಡು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯೆ ಡಾ| ಹರ್ಷಿತಾ ಪುರುಷೋತ್ತಮ್ ನೆರೆದಿರುವ ಮಹಿಳೆಯರಿಗೆ ಆರೋಗ್ಯ ಮಾಹಿತಿಯೊಂದಿಗೆ ಅತಿ ಮುಖ್ಯವಾಗಿ ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳು, ಮುಟ್ಟಿನ ತೊಂದರೆ, ಬಿಳಿಸೆರಗು, ಗರ್ಭಕೋಶದ ಕ್ಯಾನ್ಸರ್ ಮೊದಲಾದ ಕಾಯಿಲೆಗಳ ಉಪಯುಕ್ತ ಮಾಹಿತಿಯನ್ನು ತಿಳಿಸುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ದತಿ ಬಗ್ಗೆಯೂ ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು. ಕೆ.ವಿ.ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದೊರೆಯುವ ಹಲವಾರು ಸೌಲಭ್ಯಗಳ ಬಗ್ಗೆಯೂ ಸವಿವರವಾಗಿ ತಿಳಿಸಿದರು.


ತದನಂತರ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ, ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನೂ ನೀಡಲಾಯಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದರು. ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರುಗಳಾದ ಡಾ| ರಶ್ಮಿ. ಕೆ ಸ್, ಡಾ| ದೀಪ್ತಿ, ಡಾ| ಸಹನಾ ಎಸ್, ಡಾ| ನಿಲೋಫರ್, ಡಾ| ಪವಿತ್ರ, ಕಲಿಕಾ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು. ಇನ್ನರ್ ವ್ಹಿಲ್ ಕ್ಲಬ್ ಸುಳ್ಯ ಹಾಗೂ ಶುಭಶ್ರೀ ಮಹಿಳಾ ಮಂಡಳಿ ಸದಸ್ಯರು, ಪುಟಾಣಿ ಮಕ್ಕಳು ಹಾಗೂ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಬಹಳ ಅರ್ಥಪೂರ್ಣವಾಗಿದೆ.

ಮೀನಾಕ್ಷಿ ಸುಂದರ್ ಪ್ರಾರ್ಥಿಸಿ ಅಂಗನವಾಡಿ ಶಿಕ್ಷಕಿ ಶೋಭ ಎನ್ ನೆರೆದವರನ್ನು ಸ್ವಾಗತಿಸಿ, ಮೀರಾ ಮುರಳೀಧರ ರೈ ವಂದಿಸಿದರು.