ಪಂಜ ಬಳಿ ಹಾಡುಹಗಲೇ ನಡೆದ ಘಟನೆ

0

ಹಾಡುಹಗಲೇ ಮನೆಯಿಂದ ಚಿನ್ನ ಕದ್ದು ಪರಾರಿಯಾದ ಘಟನೆ ಪಂಜ
ಸಮೀಪದ ಡಬಲ್ ಕಟ್ಟೆ ಯಿಂದ ಮಾ.4 ರಂದು ವರದಿಯಾಗಿದೆ.

ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬಲ್ ಕಟ್ಟೆ ವೇದಾವತಿ ಎಂದಿನಂತೆ ಮನೆಗೆ ಬಾಗಿಲು ಹಾಕಿ ಟೈಲರಿಂಗ್ ಶಾಪ್ ಹೋಗಿದ್ದರು.

ಮಧ್ಯಾಹ್ನದ ವೇಳೆಗೆ ವೇದಾವತಿಯವರ ಮನೆಯೊಳಗೆ ಸದ್ದು ಕೇಳಿತ್ತೆಂದು , ಪಕ್ಕದ ಮನೆಯ ಅವರ ತಾಯಿ ಸೀತಮ್ಮ ರವರು ವೇದಾವತಿಯವರ ಮನೆಯ ಸಮೀಪಕ್ಕೆ ಹೋದರು. ಈ ವೇಳೆ ಹಿಂದಿನ ಬಾಗಿಲು ತೆರೆದಿತ್ತು. ಮನೆಯೊಳಗೆ ಯಾರು ಇದ್ದಾರೆ ಎಂದು ನೋಡೋಣ ಎಂದು ಹೋದಾಗ ಇಬ್ಬರು ಕಳ್ಳರು ಮನೆಯೊಳಗೆ ಹಿಂದಿನ ಬಾಗಿಲಿನಿಂದ ನುಗ್ಗಿದ್ದು ಕಂಡು ಬಂತು.


ಇದೇ ವೇಳೆ ಕಳ್ಳರು ಸೀತಮ್ಮ ರವರಿಗೆ ಜೀವ ಬೆದರಿಕೆ ಒಡ್ಡಿ ದೂಡಿ ಹಾಕಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಸಿದು ಪರಾರಿಯಾಗಿದ್ದಾರೆ.ಬೈಕ್ ನಲ್ಲಿ ಇಬ್ಬರು ಕಳ್ಳರು ಬಂದಿದ್ದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕು ಗೊಂಡಿದೆ.