ಇಂದು ಸಂಪ್ಯಾಡಿ ಶ್ರೀ ಯಜ್ಞಮೂರ್ತಿ ನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಬಳ್ಪ ಗ್ರಾಮದ ಸಂಪ್ಯಾಡಿ ಶ್ರೀ ಯಜ್ಞಮೂರ್ತಿ ನರಸಿಂಹ ದೇವಸ್ಥಾನದಲ್ಲಿ 5ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮಾ. 4ರಂದು ನಡೆಯಿತು. ಮಾ. 1ರಂದು ಬೆಳಿಗ್ಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ದೈವಗಳಿಗೆ ಕಲಶಾಭಿಷೇಕ, ತಂಬಿಲ ಸೇವೆ ನಡೆಯಿತು.

ಮಾ. 4ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಗಳು, ವಿಷ್ಣು ಸಹಸ್ರನಾಮ ಪಾರಾಯಣ, ಅಶ್ವಥ್ಥ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಸಂಜೆ 5 ಗಂಟೆಯಿಂದ ಶಿವಳ್ಳಿ ಸಂಪನ್ನ ಪಂಜ ವಲಯ ಮತ್ತು ಸಿದ್ದಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ, 7.30 ರಿಂದ ಶ್ರೀ ಮುಖ್ಯ ಪ್ರಾಣ ದೇವರಿಗೆ ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಹಾಗೂ ಪ್ರಸಾದ ವಿತರಣೆ ನಡೆಯಲಿದೆ.