ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಇಂದು ಮಹಾ ಶಿವರಾತ್ರಿ ಉತ್ಸವ- ಅಹರ್ನಿಶಿ ಭಜನಾ ಸಂಕೀರ್ತನೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವದ ಅಂಗವಾಗಿ ಇಂದು ಸೂರ್ಯೋದಯದಲ್ಲಿ ಅರ್ಚಕರಿಂದ ದೀಪ ಸ್ಥಾಪನೆಯಾಗಿ ಏಕಾಹ ಭಜನೆಯು ಆರಂಭಗೊಂಡಿತು.


ಮಹಾ ಶಿವರಾತ್ರಿ ಉತ್ಸವದ ಪ್ರಯುಕ್ತ ವಿಶೇಷವಾಗಿ ಏಕದಶಾರುದ್ರಾಭಿಷೇಕ ಸೇವೆಯಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ‌ ಅನ್ನ ಸಂತರ್ಪಣೆ ಯಾಗಲಿದೆ. ನಾಳೆ ಸೂರ್ಯೋದಯದ ಪರ್ಯಂತ ಭಜನಾ ಸಂಕೀರ್ತನೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಡೆಯಲಿರುವುದು.