ಈಶ್ವರ ಗೌಡ ಅರಂಪಾಡಿ ನಿವೃತ್ತಿ

0

ಏನೆಕಲ್ಲು ಗ್ರಾಮದವರಾಗಿದ್ದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನ ಅರಶಿನಮಕ್ಕಿಯಲ್ಲಿ ಕ್ಲೆರಿಕಲ್ ಹುದ್ದೆಯಲ್ಲಿದ್ದ ಈಶ್ವರ ಗೌಡ ಅರಂಪಾಡಿ ಫೆ.29 ರಂದು ಸೇವಾ ನಿವೃತ್ತಿ ಹೊಂದಿದರು. ಮಾಜಿ ಯೊಧರಾಗಿರುವ ಇವರು 2011 ರಲ್ಲಿ ಸೇವೆಗೆ ಸೇರಿದ್ದು ಹಾವೇರಿ, ಸುಬ್ರಹ್ಮಣ್ಯ, ಸುಳ್ಯ, ಅರಶಿನ ಮಕ್ಕಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈಶ್ವರ್ ಅವರ ಪತ್ನಿ ಮೋಹಿನಿ ಪ್ರಸ್ತುತ ಮನೆಯಲ್ಲಿದ್ದು ಆರೋಗ್ಯ ಇಲಾಖೆಯಲ್ಲಿದ್ದವರು. ಮಗ ದೀಪಕ್ ಇಂಜಿನಿಯರಿಂಗ್ ವೃತ್ತಿಯಲ್ಲಿದ್ದಾರೆ, ಇನ್ನೋರ್ವ‌ಮಗ ಪ್ರತೀಕ್ ಇಂಜಿನಿಯರಿಂಗ್ ಓದಿದ್ದು ಕೋರ್ಸ್ ಒಂದನ್ನು ಮಾಡುತಿದ್ದಾರೆ.