ಮಾ.18,19 : ಎಡಮಲೆ ಇರ್‍ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

0

ಐವರ್ನಾಡು ಗ್ರಾಮದ ಎಡಮಲೆ ಇರ್‍ವೆರ್ ಉಳ್ಳಾಕುಲು
ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮಾ.18 ಮತ್ತು 19 ರಂದು ಅಂಗಡಿಮಜಲು – ಮಾಡದಲ್ಲಿ ಭಕ್ತಿ , ಸಂಭ್ರಮದಿಂದ ನಡೆಯಲಿದೆ.
ಮಾ.12 ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಮಾ.18 ರಂದು ಪೂರ್ವಾಹ್ನ ಗಂಟೆ 10.೦೦ಕ್ಕೆ ಸ್ಥಳ ಶುದ್ಧಿ, ತಂಬಿಲ ಸೇವೆ , ಸಂಜೆ ಗಂಟೆ 7.೦೦ಕ್ಕೆ ಅಂಗಡಿಮಜಲು ಮಾಳ್ಯದಿಂದ ಭಂಡಾರ ತೆಗೆಯುವುದು, ರಾತ್ರಿ ಗಂಟೆ 11.30ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ, ಮಾ.19 ರಂದು ಪೂರ್ವಾಹ್ನ ಗಂಟೆ 9.೦೦ಕ್ಕೆ ಮೆಗ್ಯ ನೇಮ ನಡಾವಳಿ ಪ್ರಾರಂಭ, 9.30ಕ್ಕೆ ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ, 11.30ಕ್ಕೆ ನಾಯರ್ ದೈವದ ನೇಮ, ಮಧ್ಯಾಹ್ನ ಗಂಟೆ 12.30ಕ್ಕೆ ಪುರುಷ ದೈವದ ಮತ್ತು ಉಪದೈವಗಳ ನೇಮೋತ್ಸವ , 1.30 ರಿಂದ ಅನ್ನಸಂತರ್ಪಣೆ, ಸಂಜೆ ಗಂಟೆ 5.೦೦ಕ್ಕೆ ದೈವದ ಭಂಡಾರವನ್ನು ಅಂಗಡಿಮಜಲು ಮಾಳ್ಯಕ್ಕೆ ಸಾಗಿಸುವುದು. ಮಾ.18 ರಂದು ಸಂಜೆ 7.00 ಗಂಟೆಗೆ ಪ್ರತಿಭಾನ್ವಿತರಿಗೆ ಸನ್ಮಾನ ಡಾ. ಸಂದೀಪ್ ಬಿರ್ಮುಕಜೆ, ಕುಮಾರಿ ದ್ವಿತಿ ಎಸ್ ಸಾರಕೆರೆ ಬಳಿಕ ವಿಠಲ ನಾಯಕ್ ಮತ್ತು ಬಳಗದವರಿಂದ ಸಾಂಸ್ಕೃತಿಕ ರಸಸಂಜೆ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.