ಪಬ್ಲಿಕ್ ಪರೀಕ್ಷೆ – ವಿದ್ಯಾರ್ಥಿಗಳು ಕೈ ಬೊಂಬೆಯಂತಾದರೇ…?

0

ಪರೀಕ್ಷೆ ಬರೆಯಲು ಸಿದ್ಧರಾದೆವು ವಿದ್ಯಾರ್ಥಿಗಳೆಲ್ಲ ನಾವು
ಸುಪ್ರೀಂ ಕೋರ್ಟಿನ ಆದೇಶ ಕೇಳಿ ಮಂಕಾದೆವು ನಾವು
ಎರಡು ಪರೀಕ್ಷೆ ‌ಬರೆದು ಮುಗಿಸಿದೆವು
ಆದರೂ ಶುರುವಿಂದ ಓದಲು ಪ್ರಾರಂಭಿಸಿದೆವು

ಹೋದ ವರುಷವು ಇದೇ ನಮ್ಮ ಪರಿಸ್ಥಿತಿ
ಮುಂದೆ ಹೇಗಿರಬಹುದು ನಮ್ಮ ಮನಸ್ಥಿತಿ
ತಳಮಳದಿಂದ ಕೂಡಿದ ನಮ್ಮ ಮನಸ್ಸು
ಕನಸಿನ ಹಾದಿಯೂ ಆಗಲಿ ನನಸು

ಕೋರ್ಟ್ ಆದೇಶ ನೀಡುವವರೆಗೆ ಏನು ನಮ್ಮ ಗತಿ?
ಶಿಕ್ಷಣದ ವಿಷಯದಲ್ಲಿ ದಾಟಬಾರದಿತ್ತು ಅದರ‌ ಮಿತಿ
ನಮ್ಮನ್ನು ಉಪಯೋಗಿಸುತ್ತಿದ್ದಾರೆ ಕೈ ಬೊಂಬೆಯ ರೀತಿ
ಮುಂದಿನ ದಿನಗಳಲ್ಲಿ ಆಗುವುದು ಇದೊಂದೇ ನೀತಿ

ವಿದ್ಯಾರ್ಥಿ ಜೀವನದಲ್ಲಿ ಬಹುದೊಡ್ಡ ಘಟಕ
ಎಲ್ಲರ ಮನಸ್ಸಿನಲ್ಲೂ ಇದೊಂದು ದೊಡ್ಟ ತವಕ
ಇದುವೇ ನಮ್ಮ ಸರಕಾರದ ಅತೀ ದೊಡ್ಡ ಕಾಯಕ
ಮುಂದಿನ ಪ್ರಜೆಗಳಾದ ನಾವು ಆಗೋಣ ಒಳ್ಳೆಯ ನಾಯಕ

-ನಿರೀಕ್ಷಾ ಸುಲಾಯ ಎಂ
9 ನೇ ತರಗತಿ
ರೋಟರಿ ವಿದ್ಯಾಸಂಸ್ಥೆಗಳು ಸುಳ್ಯ