ಅಪ್ರಾಪ್ತ ಯುವತಿಯ ಮನೆ ನುಗ್ಗಿದ ಯುವಕನನ್ನು ಪೋಲೀಸರಿಗೊಪ್ಪಿಸಿದ ಸ್ಥಳೀಯರು

0

ಅಪ್ರಾಪ್ತ ಯುವತಿಯ ಮನೆಗೆ ತಡ ರಾತ್ರಿ ನುಗ್ಗಲೆತ್ನಿಸಿದ ಯುವಕನನ್ನು ಸ್ಥಳೀಯರು ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಮಂಡೆಕೋಲಿನಿಂದ ವರದಿಯಾಗಿದೆ.

ಯುವಕ ಖಾಸಗಿ ಬಸ್ ನಲ್ಲಿ ಕಂಡಕ್ಟರ್ ಆಗಿದ್ದು ಸುಳ್ಯ – ಮಂಡೆಕೋಲು ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿ ಆತ ಮನೆ ನುಗ್ಗಲೆತ್ನಿಸಿದಾಗ ಸ್ಥಳೀಯರು ಕಂಡು ಹಿಡಿದು ಪೋಲೀಸರಿಗೊಪ್ಪಿಸಿದರು. ನಿತೀನ್ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.