p>

ರೋಟರಿ ಕ್ಲಬ್ ಸುಳ್ಯ ಸಿಟಿ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ- ಚಾರ್ಟರ್ ನೈಟ್ ಕಾರ್ಯಕ್ರಮ

0

ಡಾ.ಚಂದ್ರಶೇಖರ
ದಾಮ್ಲೆ ಯವರಿಗೆ “ರೋಟರಿಜೀವಮಾನ ಶ್ರೇಷ್ಠ ಸಾಧಕ” ಪ್ರಶಸ್ತಿ ಪ್ರದಾನ

ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ, ರಾಜೀವಿ ಗೋಳ್ಯಾಡಿ,ಕು.ಸಾಹಿತ್ಯ ರಿಗೆ ಸನ್ಮಾನ

ರೋಟರಿ ಕ್ಲಬ್ ಸುಳ್ಯ ಸಿಟಿ ಗೆ ಜಿಲ್ಲಾ ಗವರ್ನರ್ ಮೇಜರ್ ಡೋನರ್
ರೊ. ಹೆಚ್.ಆರ್.ಕೇಶವ ರವರು ಮಾ.14 ರಂದು ಅಧಿಕೃತ ಭೇಟಿ ನೀಡಿದರು. ಗವರ್ನರ್ ರವರು ಒಂದು ದಿನದ ಕಾರ್ಯಕ್ರಮದಲ್ಲಿ
ಕ್ಲಬ್ ಚಟುವಟಿಕೆಗಳ ಕುರಿತು ಪರಿಶೀಲಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಳಿಕ ಸಂಜೆ ನಡೆದ ಚಾರ್ಟರ್ ನೈಟ್ ಕಾರ್ಯಕ್ರಮದ ಸಮಾರಂಭವು ರಥಬೀದಿಯ
ರೋಟರಿ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ರೊ.ಗಿರೀಶ್ ನಾರ್ಕೋಡು ವಹಿಸಿದ್ದರು.
ವೇದಿಕೆಯಲ್ಲಿ ಅಸಿಸ್ಟೆಂಟ್ ಗವರ್ನರ್ ರೊ.ನರಸಿಂಹ ಪೈ, ಝೋನಲ್ ಲೆಫ್ಟಿನೆಂಟ್‌ ರೊ.ಸುಜಿತ್, ಜಿ.ಎಸ್.ಆರ್ ರೊ.ಡಾ.ಕೇಶವ ಪಿ.ಕೆ, ಕ್ಲಬ್ ಪೂರ್ವಾಧ್ಯಕ್ಷ ಮುರಳೀಧರ ರೈ, ನಿಕಟಪೂರ್ವ ಕಾರ್ಯದರ್ಶಿ ರೊ.ಶಿವಪ್ರಸಾದ್ ಕೆ.ವಿ ಸುಳ್ಯ, ಕ್ಲಬ್ ‌ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಯವರಿಗೆ ಕ್ಲಬ್ ವತಿಯಿಂದ ಕೊಡ ಮಾಡಲ್ಪಡುವ ರೋಟರಿ ಜೀವಮಾನ ಶ್ರೇಷ್ಠ ಸಾಧಕ” ಪ್ರಶಸ್ತಿ ಪ್ರದಾನ ಮಾಡಲಾಯಿತು.


ವಿವಿಧ ಕ್ಷೇತ್ರದ ಸಾಧಕರಾದ ಪತ್ರಕರ್ತ, ಗಾಯಕ ಶಿವಪ್ರಸಾದ್ ಆಲೆಟ್ಟಿ, ಮಹಿಳಾ ಕ್ರೀಡಾಪಟು ಸಾಧಕಿ ರಾಜೀವಿ ಗೋಳ್ಯಾಡಿ, ಉದಯೋನ್ಮುಖ ಕಲಾವಿದೆ ಕು.ಸಾಹಿತ್ಯ ರವರನ್ನು ಈ ಸಂದರ್ಭದಲ್ಲಿ
ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.


ಕ್ಲಬ್ಬಿನ ಪೂರ್ವಾಧ್ಯಕ್ಷರ ನಾಮ ಫಲಕದ ಅನಾವರಣವನ್ನು ಜಿಲ್ಲಾ ಗವರ್ನರ್ ರವರು ನೆರವೇರಿಸಿದರು.


ಪೂರ್ವಾಧ್ಯಕ್ಷರುಗಳಾದ ರೊ.ಪ್ರಮೋದ್ , ರೊ.ತೀರ್ಥಕುಮಾರ್ ಕುಂಚಡ್ಕ, ರೊ.ಭಾನುಪ್ರಕಾಶ್, ರೊ.ಗುರುವಿಕ್ರಮ್ ಪ್ರಸಾದ್, ರೊ.ಪ್ರೀತಮ್ ಡಿ.ಕೆ, ರೊ.ಮುರಳೀಧರ ರೈ ಯವರನ್ನು ಅಭಿನಂದಿಸಲಾಯಿತು.
ಕು. ಸೋನಾ ನಾರ್ಕೋಡು ಪ್ರಾರ್ಥಿಸಿದರು. ರೊ.ಗಿರೀಶ್ ನಾರ್ಕೋಡು ಸ್ವಾಗತಿಸಿದರು.
ಕಾರ್ಯದರ್ಶಿ ಚೇತನ್ ವಾರ್ಷಿಕ ವರದಿ ವಾಚಿಸಿ, ವಂದಿಸಿದರು.
ಕ್ಲಬ್‌ನ ವಿವಿಧ ಜವಬ್ದಾರಿ ನಿರ್ವಹಿಸಿರುವ ಸದಸ್ಯರು ವರ್ಷದ ಚಟುವಟಿಕೆ ವಿವರ ನೀಡಿದರು.

ರೊ.ಪ್ರೀತಮ್ ಮತ್ತು
ರೊ. ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಸುಳ್ಯ
ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ತಾಲೂಕಿನ ಕ್ಲಬ್ ಸದಸ್ಯರು,ರೋಟರಿ ಸಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.