ಐನೆಕಿದು ಗ್ರಾಮದ ತೋಟದಮಜಲು ಮನೆಗೆ ಬಂದ ಅಪರಿಚಿತರು

0

ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ನಿನ್ನೆ (ಮಾ.23) ಸಂಜೆ ಮೂರು ಮಂದಿ ಅಪರಿಚಿತರು ಬಂದು ಹೋಗಿದ್ದು , ನಕ್ಸಲರಿರಬಹುದೇ ಎಂಬ ಗುಮಾನಿ ಉಂಟಾಗಿದೆ.

ಅಶೋಕ್ ಎಂಬವರ ಮನೆಗೆ ಬಂದಿರುವ ಅವರು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ನಕ್ಸಲ್ ನಿಗ್ರಹ ದಳದವರು ಇದೆ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಠೇ ಕೂಜಿಮಲೆ ಪ್ರದೇಶದಲ್ಲಿ‌ ನಕ್ಸಲರ ಚಟುವಟಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇವರು ಕೂಡಾ ನಕ್ಸಲರೇ ಆಗಿರಬಹುದು ಎಂದು ಅಂದಾಜಿಸಲಾಗಿದ್ದು ಬಂದವರು ಶಸ್ತ್ರಾಸ್ತ್ರ ಹೊಂದಿದ್ದರು ಎನ್ನಲಾಗುತ್ತಿದೆ.

ಶಂಕಿತ ನಕ್ಸಲರು ಆಗಮಿಸಿದ ಮನೆಯವರು ಸಂಪರ್ಕಕ್ಕೆ ಲಭ್ಯರಾಗಿಲ್ಲ. ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಯವರು ಕೂಡಾ ಘಟನೆಯನ್ನು ಖಚಿತಪಡಿಸಿಲ್ಲ.