ಮೊರಂಗಲ್ಲು ಮಹಮ್ಮಾಯಿ ದೇವಿ‌ ದೇವಸ್ಥಾನದಲ್ಲಿ ಪೂಜೆ- ದರ್ಶನ ಪಾತ್ರಿಯವರಿಂದ ದರ್ಶನ ಸೇವೆ

0

ಆಲೆಟ್ಟಿ ಗ್ರಾಮದ ಪ.ಜಾತಿ ಕಾಲನಿಯ ಮೊರಂಗಲ್ಲು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ದೇವಿಯ ಕಾಲಾವಧಿ ವಾರ್ಷಿಕ ಪೂಜೆಯು ಇಂದು ನಡೆಯಿತು.
ಬೆಳಗ್ಗೆ ಗಣಪತಿ ಹವನವಾಗಿ ಶ್ರೀ ದೇವಿಗೆ ಮಧ್ಯಾಹ್ನ ಪೂಜೆಯಾಗಿ ನಂತರ ಶ್ರೀ ದೇವಿಯ ದರ್ಶನ ಪಾತ್ರಿಗಳಿಂದ ಮಹಮ್ಮಾಯಿ ಪೂಜೆಯು ದರ್ಶನದ ಸೇವೆಯೊಂದಿಗೆ ನಡೆಯಿತು. ಬಳಿಕ ಶ್ರೀ ದೇವಿಯ ಹಾಗೂ ಗುಳಿಗ ದೈವದ ಪಾತ್ರಿಯವರಿಂದ ಅಭಯದ ನುಡಿಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.