ಗುತ್ತಿಗಾರಿನ ಸೈoಟ್ ಮೇರಿಸ್ ಚರ್ಚಿನ ವತಿಯಿಂದ ಶಿಲುಬೆಯ ಹಾದಿ ಕಾರ್ಯಕ್ರಮ

0

ತಾಲೂಕಿನ ಚರ್ಚ್‌ಗಳಲ್ಲಿ ಕೂಡ ವಿಶೇಷ ಪ್ರಾರ್ಥನೆ

ಗುತ್ತಿಗಾರಿನ ಸೈoಟ್ ಮೇರಿಸ್ ಚರ್ಚಿನ ವತಿಯಿಂದ ಶುಭ ಶುಕ್ರವಾರ ಆಚರಣೆ ಮಾ.29 ರಂದು ಆಚರಿಸಲಾಯಿತು. ಗುತ್ತಿಗಾರು ಕೆಳಗಿನ ಪೇಟೆಯಿಂದ ಚರ್ಚ್ ವರಗೆ ಶಿಲುಬೆಯ ಹಾದಿಯ ಮೆರವಣಿಗೆ ಕಾರ್ಯಕ್ರಮ ಭಕ್ತಿಯಿಂದ ನಡೆಸಲಾಯಿತು. ಧರ್ಮಗುರು ಫಾದರ್ ಆದರ್ಶ್ ಜೋಸೆಫ್ ಧಾರ್ಮಿಕ ವಿಧಿ ನೆರವೇರಿಸಿದರು.
ಯೇಸು ಕ್ರಿಸ್ತರ ಯಾತನೆಯನ್ನು ಸ್ಮರಿಸುವ ಶಿಲುಬೆಯ ಹಾದಿಯ ಕಾರ್ಯಕ್ರಮದಲ್ಲಿ ಚರ್ಚಿನ ಸದಸ್ಯರು ಭಾಗವಹಿಸಿದರು.

ಹಾಗೂ ಸುಳ್ಯ ತಾಲೂಕಿನಲ್ಲಿರುವ ಚರ್ಚ್ ಗಳಲ್ಲಿ ಕೂಡ ತಮ್ಮ ಆರಾಧ್ಯಮೂರ್ತಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಶುಭ ಶುಕ್ರವಾರವನ್ನಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಚರ್ಚಿನ ಕ್ರೈಸ್ತರು , ಧರ್ಮ ಭಗಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.