ಸುಳ್ಯದಲ್ಲಿ ಸ್ನೇಹ ಸಂಸ್ಕೃತಿ ಶಿಬಿರ-2024 ಉದ್ಘಾಟನೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮಾ.31 ರಂದು ಸ್ನೇಹ ಸಂಸ್ಕೃತಿ ಶಿಬಿರದ ಉದ್ಘಾಟನೆಯನ್ನು ಮಾಡಲಾಯಿತು.
ಶಿಬಿರವನ್ನು ಉದ್ಘಾಟಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಮೂಕಮಲೆ ಅವರು “ಶಿಬಿರಗಳು ಎಲ್ಲಾ ಕಡೆ ನಡೆಯುತ್ತವೆ. ಆದರೆ ಸ್ನೇಹ ಸಂಸ್ಕೃತಿ ಶಿಬಿರವು ವಿಭಿನ್ನವಾದಂತಹ ಶಿಬಿರವಾಗಿದೆ. ಇಲ್ಲಿ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತದೆ” ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆ ಅವರು ಮಾತನಾಡಿ “ಭಾರತೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಅದನ್ನು ಉಳಿಸಿ-ಬೆಳೆಸುವ ಉದ್ದೇಶದೊಂದಿಗೆ ಸ್ನೇಹ ಸಂಸ್ಕೃತಿ ಶಿಬಿರವನ್ನು ನಡೆಸಲಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇರುವ ನಾವು ಮಕ್ಕಳನ್ನು ತಯಾರು ಮಾಡಲು ಈ ಶಿಬಿರವು ಸಹಕಾರಿಯಾಗಲಿದೆ. ಸಂಸ್ಕೃತಿ ಶಿಬಿರದಲ್ಲಿ ಕಲಿಸುವ ವಿಷಯಗಳನ್ನು ಮಕ್ಕಳು ಏಕಾಗ್ರ-ಚಿತ್ತದಿಂದ ಕಲಿತು ಶಿಬಿರದ ಸಂಪೂರ್ಣ ಸದುಪಯೋಗವನ್ನು ಮಾಡಿಕೊಳ್ಳಬೇಕು” ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಚೈತ್ರಶ್ರೀ ಅವರು ವಂದಿಸಿ, ಶಿಕ್ಷಕಿ ಶ್ರೀಮತಿ ಅಮೃತಾ.ಕೆ. ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.