ನವೀನ್ ಚಾತುಬಾಯಿಯವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಸಮಗ್ರ ಕೃಷಿಕ ಪ್ರಶಸ್ತಿ

0

ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿಯವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಲ್ಯೂಮ್ನಿ ಎಸೋಸಿಯೇಷನ್ ವತಿಯಿಂದ 2023-24ನೇ ಸಾಲಿಗೆ ನೀಡುವ ಡಾ.ಜಿ.ಕೆ. ವೀರೇಶ್ ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ ದೊರೆತಿದೆ.


ಎ.4ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮತ್ತು 25,000/ರೂ.ನಗದು ಬಹುಮಾನ ನೀಡಿ ಇವರನ್ನು ಗೌರವಿಸಲಾಯಿತು. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿ. ಗೋಪಾಲ ಗೌಡರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎನ್. ವಿ. ಸುರೇಶ್, ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ, ಕುಲಪತಿಗಳಾದ ಡಾ. ವಿಷ್ಣುವರ್ಧನ್ ಹಾಗೂ ಅಲ್ಯೂಮ್ನಿ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಎಚ್. ಎಲ್.ಹರೀಶ್ ರವರು ಉಪಸ್ಥಿತರಿದ್ದರು. ನವೀನ್ ರವರು ಕರಾವಳಿ ಹಾಗೂ ಮಲೆನಾಡು ಕರ್ನಾಟಕ ಭಾಗದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಏಕೈಕ ಕೃಷಿಕರಾಗಿದ್ದಾರೆ.