ಪುಳಿಕುಕ್ಕು ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಕೆ : ಈಜು ತರಬೇತಿ ಶಿಬಿರ ಸ್ಥಗಿತ

0

ಪುಳಿಕುಕ್ಕು ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಭಾರಿ ಇಳಿಕೆಯಾಗಿದ್ದು ಇಲ್ಲಿ ಆಯೋಜಿಸಲಾಗಿದ್ದ ಈಜು ತರಬೇತಿ ಶಿಬಿರವನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿದೆ.

ಬಿಸಿಲ‌ ಬೇಗೆಯಿಂದ ನಾಡು ತತ್ತರಿಸುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ನಿಲ್ಲತೊಡಗಿದೆ.

ಜೇಸಿಐ ಪಂಜ ಪಂಚಶ್ರೀ ಮತ್ತು ಸ್ಕೌಟ್ ಸಂಸ್ಥೆಯ ಸಹಯೋಗದಲ್ಲಿ ಏ.12 ರಂದು ಪುಳಿಕುಕ್ಕು ನದಿಯಲ್ಲಿ ಆರಂಭಗೊಳ್ಳಬೇಕಿದ್ದ ಈಜು ತರಬೇತಿ ಶಿಬಿರವನ್ನು ಸ್ಥಗಿತ ಗೊಳಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.