ಪೆರಾಜೆಯಲ್ಲಿ ಕ್ಯಾಂಟಿನ್ ನುಗ್ಗಿದ ಕಾರು : ನಾಲ್ವರಿಗೆ ಗಾಯ

0

ಪೆರಾಜೆಯ ಮಸೀದಿ ಬಳಿ ಇರುವ ಕ್ಯಾಂಟಿನ್ ಗೆ ಕಾರೊಂದು ನುಗ್ಗಿದ ಪರಿಣಾಮ ನಾಲ್ವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಇಂದು ಸಂಜೆ ಈ ಘಟನೆ ನಡೆದಿದ್ದು, ಮಡಿಕೇರಿ ಕಡೆಯಿಂದ ಬರುತಿದ್ದ ಸ್ವಿಫ್ಟ್ ಕಾರು ಕ್ಯಾಂಟಿನ್ ಗೆ ನುಗ್ಗಿತೆನ್ನಲಾಗಿದೆ. ನಾಲ್ಚರು ಗಾಯಗೊಂಡಿದ್ದು, ಮೂವರನ್ನು ಸುಳ್ಯ ಆಸ್ಪತ್ರೆ ಹಾಗೂ ಒಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿರುವುದಾಗಿ ತಿಳಿದುಬಂದಿದೆ.