ಆಲೆಟ್ಟಿಯಲ್ಲಿ ಮಕ್ಕಳ ವಸಂತ ಯೋಗ ಶಿಬಿರದ ಉದ್ಘಾಟನೆ

0

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆಲೆಟ್ಟಿ ಶ್ರೀ ಸದಾಶಿವ ಶಾಖೆಯ ಆಶ್ರಯದಲ್ಲಿ ಮಕ್ಕಳ ಯೋಗ ಶಿಬಿರದ ಉದ್ಘಾಟನೆಯು ಇಂದು ಬೆಳಗ್ಗೆ ನೆರವೇರಿತು.


ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುನಿಲ್ ಅಜ್ಜಾವರ ರವರು ದೀಪ ಪ್ರಜ್ವಲಿಸಿದರು. ಆಲೆಟ್ಟಿ ಶಾಖೆಯ ಸಂಚಾಲಕ ರಾಕೇಶ್ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಬಂಟರ ಭವನ ಶಾಖೆಯ ಮುಖ್ಯ ಶಿಕ್ಷಕಿ ಸುನಂದಾ ಶೆಟ್ಟಿ ಯವರು ಯೋಗದ ಕುರಿತು ದಿಕ್ಸೂಚಿ ಭಾಷಣ ಮಾಡಿದರು.


ವೇದಿಕೆಯಲ್ಲಿ ಆಲೆಟ್ಟಿ ಶಾಖೆಯ ಮುಖ್ಯ ಶಿಕ್ಷಕರಾದ ರಾಜೇಶ್ ಆಲೆಟ್ಟಿ, ವಸಂತ ಆಲೆಟ್ಟಿ,ವೀಣಾವಸಂತ ಆಲೆಟ್ಟಿ ಉಪಸ್ಥಿತರಿದ್ದರು. ಕು.ಕೀರ್ತನಾ ಆಲೆಟ್ಟಿ ಶಾಂತಿ ಮಂತ್ರ ಪಠಿಸಿದರು. ವಸಂತ ಆಲೆಟ್ಟಿ ಸ್ವಾಗತಿಸಿದರು.


ಶ್ರೀಮತಿ ನವ್ಯ ಆಲೆಟ್ಟಿ ವಂದಿಸಿದರು. ಶ್ರೀಮತಿ ವೀಣಾ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಹಿರಿಯ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದರು.