ಪಂಜದಲ್ಲಿ ಉಷಾ ಮೆಡಿಕಲ್ಸ್ ಶುಭಾರಂಭ

0

ಕಳೆದ 27 ವರುಷಗಳಿಂದ ಪುತ್ತೂರಿನಲ್ಲಿ ಮನೆ ಮಾತಾಗಿರುವ ಉಷಾ ಮೆಡಿಕಲ್ಸ್ ಪಂಜದ ಜನತೆಯ ಅನುಕೂಲಕ್ಕಾಗಿ ಪಂಜದ ವಿ.ಕೆ ರೆಸಿಡೆನ್ಸಿ ಯಲ್ಲಿ ಉಷಾ ಮೆಡಿಕಲ್ಸ್ ಪಂಜ ಶಾಖೆ ಏ.13 ರಂದು ಶುಭಾರಂಭ ಗೊಂಡಿತು.


ಹಿರಿಯ ವೈದ್ಯ ಡಾ.ರಾಮಯ್ಯ ಭಟ್ ಉದ್ಘಾಟಸಿದರು.


ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕೆ ಎಸ್ ಸಭಾಧ್ಯಕ್ಷತೆ ವಹಿಸಿದ್ದರು.


.ಮುಖ್ಯ ಅತಿಥಿಗಳಾಗಿ ಪಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಕಾನತ್ತೂರ್ ,ವಿ.ಕೆ ರೆಸಿಡೆನ್ಸಿ ಮಾಲಕ ವಿಜಯ ಕುಮಾರ್ ಸೊರಕೆ, , ಸಂತ ರೀತ ಚರ್ಚ್ ಧರ್ಮ ಗುರು ಫಾ. ಅಮಿತ್ ರೋಡ್ರಿಗಸ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ಹಾಗೂಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಕಂಬಳ ಆನಂದ ಗೌಡ, ಸಂಸ್ಥೆಯ ಮುಖ್ಯಸ್ಥರಾದ
ಶ್ರೀಮತಿ ಅರುಣಾ ಜಿ ಭಟ್,ಪಿ ಗಣೇಶ್ ಭಟ್ ಹಾಗೂ ಆದಿತ್ಯ ಕಶ್ಯಪ್ ಯಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಕಂಬಳ ಆನಂದ ಗೌಡ, ಒಂದಿಷ್ಟು ಸಮಾಜಕ್ಕಾಗಿ ಯುವ ತೇಜಸ್ಸು ಟ್ರಸ್ಟ್ ಪಂಜ, ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವರ್ಷಲಕ್ಷ್ಮಿ ಪ್ರಾರ್ಥಿಸಿದರು.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಮಾಲಕ ಪಿ.ಗಣೇಶ್ ಭಟ್ ವಂದಿಸಿದರು.


ಸೇವೆಗಳು:
ಪ್ರಸಿದ್ಧ ಕಂಪನಿಗಳ ಔಷಧಿಗಳು, ಪೆಟ್ ಫುಡ್, ಪಶು ಔಷಧಿಗಳು, ಸರ್ಜಿಕಲ್ ಐಟಂ, ವಾಟರ್ ಬೆಡ್, ವ್ಹೀಲ್ ಚೇರ್, ನೆಬಿಲೈಸರ್, ವಾಕಿಂಗ್ ಸ್ಟಿಕ್, ಮೆಡಿಕೇಟೆಡ್ ಫೂಟ್ ವೇರ್,ಯೋಗ ಮ್ಯಾಟ್, ವಾಕರ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.