ಸುಳ್ಯ ಸೆಂಟರ್‌ನಲ್ಲಿ ಶ್ರೀ ಮೂಕಾಂಬಿಕಾ ಹಾರ್ಡ್ ವೇರ್ ಶುಭಾರಂಭ

0

ಗ್ರಾಹಕರಿಗೆ ಉತ್ತಮ ಮಾಹಿತಿಯೊಂದಿಗೆ, ಒಳ್ಳೆಯ ಸರ್ವಿಸ್ ನೀಡಿ :ಪದ್ಮಶ್ರೀ ಪ್ರಶಸ್ತಿ ವಿಜೇತ ಗಿರೀಶ್ ಭಾರದ್ವಾಜ್

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪವಿರುವ ಸುಳ್ಯ ಸೆಂಟರ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಶ್ರೀ ಮೂಕಾಂಬಿಕಾ ಹಾರ್ಡ್ ವೇರ್ ಇಂದು ಶುಭಾರಂಭಗೊಂಡಿತು.

ಪದ್ಮಶ್ರೀ ಪ್ರಶಸ್ತಿ ವಿಜೇತ ಗಿರೀಶ್ ಭಾರದ್ವಾಜ್ ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಸುಳ್ಯ ಬ್ಯಾಂಕ್ ಬರೋಡದ ಮ್ಯಾನೇಜರ್ ಅಶೋಕ್‌ರವರು
ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಪ್ರಜ್ವಲನೆ ಗೈದರು.

ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಗಿರೀಶ್ ಭಾರದ್ವಾಜ್‌ರವರು ಶ್ರೀ ಮೂಕಾಂಬಿಕಾ ಹಾರ್ಡ್ ವೇರ್ ಸಂಸ್ಥೆಯು ಸುಳ್ಯ ಹೃದಯ ಭಾಗದಲ್ಲಿದೆ. ಗ್ರಾಹಕರಿಕೆ ನಮ್ಮಲ್ಲಿರುವ ಎಲ್ಲಾ ಸಾಮಾಗ್ರಿಗಳ ಕುರಿತು ಉತ್ತಮ ಮಾಹಿತಿಯೊಂದಿಗೆ, ಒಳ್ಳೆಯ ಸರ್ವಿಸ್ ನೀಡಿದ್ರೆ ಸಂಸ್ಥೆಯು ಉತ್ತಮ ಹೆಸರು ಮಾಡಿಯೇ ಮಾಡುತ್ತದೆ ಎಂದು ಶುಭಹಾರೈಸಿದರು.

ಹಾಗೂ ಪಿ.ಬಿ.ಸುಧಾಕರ ರೈ, ವಿನುತಾ ಪಾತಿಕಲ್ಲು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.

ಬಳಿಕ ಆಗಮಿಸಿ ಅತಿಥಿಗಳಿಗೆ ಶಾಲು ಹೊದಿಸಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶ್ರೀಕಾಂತ್ ಡಿ.ಪಿ, ದೀಕ್ಷಿತ್ ಕೆ, ಮಾಲಕರ ಪೋಷಕರಾದ ಪದ್ಮನಾಭ, ಪವಿತ್ರ, ಸುಂದರ ಗೌಡ ಕಂಟ್ರಮಜಲು , ಸುಲೋಚನ ಹಾಗೂ ಆತ್ಮೀಯರಾದ ಪ್ರೀತಿ ಮೊಬೈಲ್ ನ ಮಾಲಕ ರಿತೇಶ್, ಸನತ್ , ಸನತ್ ಶ್ರೀದೇವಿ, ಮಂಜುಳಾ , ಲೋಹಿತ್ , ಸೋಮನಾಥ ಪೂಜಾರಿ ಸೇರಿದಂತೆ ಹಿತೈಷಿಗಳು ಉಪಸ್ಥಿತರಿದ್ದರು.

ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.

ಇಲ್ಲಿ ಹ್ಯಾಂಡ್ ಟೂಲ್ಸ್, ಬಿಲ್ಡಿಂಗ್ ಮೆಟೀರಿಯಲ್ಸ್, ಪ್ರೊಟೆಕ್ಟಿವ್ ಸೇಫ್ಟಿವೇರ್, ಕೋಟೆಡ್ ಮೆಶ್, ರೂಫಿಂಗ್ ಶೀಟ್ಸ್, ಬೋಲ್ಟ್ -ನಟ್ಸ್, ಯುಪಿವಿಸಿ ಐಟಂ, ಪವರ್ ಟೂಲ್ಸ್, ಪೈಂಟ್ಸ್ , ಜೆಐ ಮೆಶ್, ಜೆಐ ಟ್ಯೂಬ್ಸ್, ಎಂಎಸ್ ಆ್ಯಂಗಲ್ ಮತ್ತು ಚಾನಲ್, ಪ್ಲಾಸ್ಟಿಕ್ ಐಟಂ, ಅಡ್ವಾನ್ಸ್ಡ್ ಟೂಲ್ಸ್ ಸೇರಿದಂತೆ ಎಲ್ಲಾ ತರಹದ ಹಾರ್ಡ್ ವೇರ್ ಉಪಕರಣಗಳು ನಮ್ಮಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಮಾಲಕರ ತಿಳಿಸಿದ್ದಾರೆ.