ಬೊಳ್ಳಾಜೆ ಮತದಾನ ಕೇಂದ್ರದಲ್ಲಿ ಮತದಾನ ಆರಂಭ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಿದೆ.
ಇಲ್ಲಿ ಒಟ್ಟು 1105 ಮತದಾರರಿದ್ದು, 545 ಪುರುಷರು, 560 ಮಹಿಳೆಯರು ಇಂದು ಮತ ಚಲಾಯಿಸಲಿದ್ದಾರೆ.‌

ಮತದಾನ ಮಾಡಲು ಬರುವವರಿಗೆ ಕುಡಿಯುವ ನೀರಿನ‌ ವ್ಯವಸ್ಥೆ, ಮೊಬೈಲ್ ಫೋನ್ ಇಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಪೋಲೀಸ್ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. ಮುಂಜಾನೆಯಿಂದಲೇ ಸರತಿಯ ಸಾಲು ಕಂಡು ಬಂದಿದೆ.