ಅಡ್ಕಾರು ಮತದಾನ ಕೇಂದ್ರದಲ್ಲಿ ಮದುಮಗಳಿಂದ ಹಕ್ಕು ಚಲಾವಣೆ

0

ಜಾಲ್ಸೂರು ಗ್ರಾಮದ ಅಡ್ಕಾರು ಮತದಾನ ಕೇಂದ್ರದಲ್ಲಿ ಮದುಮಗಳೊಬ್ಬರು ಬಂದು ತಮ್ಮ ಹಕ್ಕು ಚಲಾಯಿಸಿದರು.

ಜಾಲ್ಸೂರು ಗ್ರಾಮದ ಅಡ್ಕಾರುಬೈಲು ಗೋಪಾಲ ಬೆಳ್ಚಪ್ಪಾಡ ಅವರ ಪುತ್ರಿ ಹರ್ಷಿತ ಅವರ ವಿವಾಹವು ಇಂದು ಕಾಸರಗೋಡಿನಲ್ಲಿ ನಡೆಯಲಿದ್ದು, ಮದುವೆ ದಿಬ್ಬಣ ಹೊರಡುವುದಕ್ಕೂ ಮೊದಲು ಅವರು ಅಡ್ಕಾರಿನ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಮತ ಚಲಾಯಿಸಿದರು.