ಪೈಚಾರು ಮದ್ರಸಾ ಪ್ರಾರಂಭೋತ್ಸವ

0

ಪೈಚಾರು ಬದ್ರಿಯಾ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ಖುವ್ವತ್ತುಲ್ ಇಸ್ಲಾಂ ಮದರಸ ಪ್ರಾರಂಭೋತ್ಸವ ಎ.27 ರಂದು ಖುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ‌ ಅಧ್ಯಕ್ಷತೆಯನ್ನು ಬದ್ರಿಯ ಜುಮಾ ಮಸೀದಿ ಅಧ್ಯಕ್ಷರಾದ ಶರೀಫ್ ಟಿಎ ಯವರು ವಹಿಸಿದ್ದರು. ಪ್ರಸ್ತುತ ಕಾರ್ಯಕ್ರಮದ ಉದ್ಘಾಟನೆಯನ್ನು .
ಮದರಸ ಮುಅಲ್ಲಿಂ ಹನೀಫ್ ಮದನಿಯ ಉದ್ಘಾಟಿಸಿ ಮಾತನಾಡಿದರು.


ಬದ್ರಿಯ ಜುಮಾ ಮಸೀದಿ ಖತಿಬರಾದ ಶಮೀರ್ ನಈಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮದರಸ ಸದರ್ ಮುಅಲ್ಲಿಂ ಹಂಝ ಝೊಹರಿ ಮದರಸ ಹಾಗೂ ವಿದ್ಯಾರ್ಥಿಗಳ ಬಗ್ಗೆ ಮತನಾಡಿದರು.
ಈ ಸಂದರ್ಭದಲ್ಲಿ ಬಿಜೆಎಮ್ ಕಾರ್ಯದರ್ಶಿ ಹನೀಫ್ ಪಿ ಕೆ, ಮದರಸ ಉಸ್ತುವಾರಿ ರಝಾಕ್ ಆರ್ತಾಜೆ, ಬಿಜೆಎಮ್ ಜೊತೆ ಕಾರ್ಯದರ್ಶಿ ಇಸಾಕ್ ಕೆ ಪಿ, ಬಿಜೆಎಮ್ ಸದಸ್ಯರಾದ ಇಬ್ರಾಹಿಂ ಶಾಂತಿನಗರ. ಹಾಗೂ ವಿದ್ಯಾರ್ಥಿಗಳು, ಪೋಷಕರು,ಸ್ಥಳೀಯರು ಭಾಗವಹಿಸಿದ್ದರು.
ಮದರಸ ಉಸ್ತುವಾರಿ ಮುಜೀಬ್ ಪೈಚಾರ್ ಸ್ವಾಗತಿಸಿ ವಂದಿಸಿದರು.