ಎಲಿಮಲೆ ಸರಕಾರಿ ಪ್ರೌಢ ಶಾಲೆಗೆ ಶೇ.94.9 ಫಲಿತಾಂಶ

0

2023-24ನೇ ಸಾಲಿನ ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.94.9 ಫಲಿತಾಂಶ ದಾಖಲಿಸಿದೆ.

ಒಟ್ಟು 59 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 27 ಹುಡುಗಿಯರು ಮತ್ತು 32 ಹುಡುಗರು ಪರೀಕ್ಷೆ ಬರೆದಿದ್ದರು. ಅದರಲ್ಲಿ 56 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 29 ಹುಡುಗರು 27 ಹುಡುಗಿಯರು ತೇರ್ಗಡೆಯಾಗಿದ್ದಾರೆ.‌

ದೇವಚಳ್ಳ ಗ್ರಾಮದ ಹರ್ಲಡ್ಕ ಲೋಕೇಶ್ ಮತ್ತು ನಿರ್ಮಲ ದಂಪತಿಗಳ ಪುತ್ರ ಪುಷ್ಪಕ್ ಬಿ. 562, ನೆಲ್ಲೂರು ಕೆಮ್ರಾಜೆ ಗ್ರಾಮದ ಮುಂಡೋಕಜೆ ಅಚ್ಚುತ ಎಂ. ಮತ್ತು ಪ್ರೇಮಲತಾ ದಂಪತಿಗಳ ಪುತ್ರಿ ಚೇತನಾ ಎಂ.ಎ. 557, ನಾಲ್ಕೂರು ಗ್ರಾಮದ ಕೊಂಬೊಟ್ಟು ನಿತ್ಯಾನಂದ ಕೆ. ಮತ್ತು ಶಾರದಾ ಕೆ.ಎನ್. ದಂಪತಿಗಳ ಪುತ್ರಿ ಪೃಥ್ವಿ ಎನ್.ಕೆ. 555, ಅಮರಮುಡ್ನೂರು ಗ್ರಾಮದ ದೊಡ್ಡತೋಟ ಪ್ರಭಾಕರ ನಾಯಕ್ ಮತ್ತು ಸವಿತಾ ದಂಪತಿಗಳ ಪುತ್ರಿ ಭಾವನಾ 549, ಎಡಮಂಗಲ ಗ್ರಾಮದ ಹೇಮಳ ಧರ್ಮಪಾಲ ಎಂ. ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ನಿಕ್ಷೀತಾ ಎಂ.ಡಿ. 536, ದೇವಚಳ್ಳ ಗ್ರಾಮದ ಕಲ್ಲುಪಣೆ ಪುರುಷೋತ್ತಮ ಮತ್ತು ಪೂರ್ಣಿಮ ದಂಪತಿಗಳ ಪುತ್ರ ಪ್ರೇಕ್ಷಿತ್ ಕೆ.ಪಿ. 535 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.