ಗ್ರಾಮಜನ್ಯ ಸಂಸ್ಥೆಗೆ ರಾಷ್ಟ್ರೀಯ ಜೇನು ಮಂಡಳಿಯ ಅಜೀವ ಕಾರ್ಪೊರೇಟ್ ಸದಸ್ಯತ್ವ

0

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಯು ರೈತರೊಂದಿಗೆ ಸಮುದಾಯ ಜೇನುಕೃಷಿಯಲ್ಲಿ ತೊಡಗಿ ಕೊಂಡಿದ್ದು , ಸದ್ಯದಲ್ಲೇ ಪುತ್ತೂರಿನಲ್ಲಿ ಅತ್ಯಾಧುನಿಕ ಮಟ್ಟದ ಜೇನು ಸಂಸ್ಕರಣ ಫಟಕ , ಜೇನಿನ ಪ್ರಯೋಗಶಾಲೆ , ಜೇನು ಶಿಥಲೀಕರಣ ಘಟಕ ಸೇರಿದಂತೆ ಜೇನು ಮತ್ತು ಜೇನು ಮೇಣದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕ ಲೋಕಾರ್ಪಣೆಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ರಾಷ್ಟ್ರೀಯ ಜೇನುಮಂಡಳಿ ಯ ಅಜೀವ ಕಾರ್ಪೊರೇಟ್ ಸದಸ್ಯತ್ವವು ಗ್ರಾಮಜನ್ಯಕ್ಕೆ ದೊರೆತಿದೆ.
ಮುಂದಿನ ದಿನಗಳಲ್ಲಿ ಸ್ಥಳೀಯ ಜೇನುಕೃಷಿಕರಿಂದ ಜೇನು ಖರೀದಿ ಮಾಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೃ ಷಿಕರಿಗೆ ಅನುಕೂಲಕರ ವಾಗಿರುವ ಮಣ್ಣು ಪರೀಕ್ಷೆ ಸಾವಯವ ಗೊಬ್ಬರ ,ಒಳಸುರಿಗಳ ಸೇವೆಯನ್ನು ನಿಂತಿಕಲ್ಲು ಶಾಖಾ ಕಚೇರಿಯಲ್ಲಿ ಪ್ರಾರಂಭಿಸಿರುತ್ತದೆ.