ಚೆಂಬು: ಊರುಬೈಲಿನಲ್ಲಿ ಚರಂಡಿ ಅವ್ಯವಸ್ಥೆಯಿಂದ ರಸ್ತೆಯಲ್ಲೇ ತುಂಬುತ್ತಿರುವ ಮಳೆನೀರು

0

ಚೆಂಬು ಗ್ರಾಮದ ಊರುಬೈಲು ಜನತಾ ಕಾಲನಿಯ ಪಕ್ಕದ ರಸ್ತೆಯ ಎರಡೂ ಬದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದ ಮಳೆನೀರು ರಸ್ತೆಯಲ್ಲೇ ನಿಲ್ಲುತ್ತಿದೆ.
ದಿನನಿತ್ಯ ನೂರಾರು ಜನ ಸಾರ್ವಜನಿಕರು ಸಂಚರಿಸುವ ಈ ರಸ್ತೆ ಮಳೆ ಬಂದಾಗ ಹೊಳೆಯಂತಾಗುತ್ತಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ಚರಂಡಿಗಳಿಲ್ಲ. ಸ್ಥಳೀಯ ಗ್ರಾಮ ಪಂಚಾಯತಿ ಇದರತ್ತ ಗಮನಹರಿಸಬೇಕಾಗಿದೆ.