ಕೆಪಿಟಿಸಿಎಲ್ ನೌಕರರ ಸಂಘ : ಸುಳ್ಯ ಪ್ರತಿನಿಧಿಯಾಗಿ ಅರುಣ್ ಆಯ್ಕೆ

0

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ದ ನೌಕರರ ಮೆಸ್ಕಾಂ ಸುಳ್ಯ ಉಪವಿಭಾಗದ ಪ್ರತಿನಿಧಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸುಳ್ಯ ಮೆಸ್ಕಾಂ ಶಾಖೆಯ ಪವರ್ ಮೆನ್ ಅರುಣ್ ರವರು ಆಯ್ಕೆಯಾಗಿದ್ದಾರೆ.

ಸುಳ್ಯ ಉಪವಿಭಾಗದಿಂದ ಪವರ್ ಮೆನ್ ಅರುಣ್ ಹಾಗೂ ಸುಬ್ರಹ್ಮಣ್ಯ ಉಪವಿಭಾಗದ ಮೆಕ್ಯಾನಿಕ್ ದರ್ಜೆ 2 ಪಾಲಾಕ್ಷಯ್ಯ ಎಂ.ವಿ ನಾಮಪತ್ರ ಸಲ್ಲಿಸಿದ್ದರು.

ಮೆಸ್ಕಾಂನ 64 ಮಂದಿ ನೌಕರರು ಮತದಾರರಾಗಿದ್ದರು. ಚುನಾವಣೆ ‌ನಡೆದು ಮತ ಎಣಿಕೆ ನಡೆದಾಗ ಅರುಣ್ ರವರು 39 ಹಾಗೂ ಪಾಲಾಕ್ಷಯ್ಯ 25 ಮತಗಳನ್ನು ಪಡೆದರು. ಹೆಚ್ಚು ಮತ ಪಡೆದ ಅರುಣ್ ಪ್ರತಿನಿಧಿಯಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಮೆಸ್ಕಾಂ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಪ್ರಕ್ರಿಯೆ ನಡೆಸಿಕೊಟ್ಟರು.