ನಾವೂರು ಮಹಾಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಕಾಲಾವಧಿ ಮಹಾಪೂಜೆ

0


ಸುಳ್ಯ ಗಾಂಧಿನಗರ ನಾವೂರು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾಹಮ್ಮಾಯಿ ಅಮ್ಮನವರ ಹಾಗೂ ಪರಿವಾರ ದೈವಗಳ ಕಾಲಾವಧಿ ಮಹಾಪೂಜೆ ಕಾರ್ಯಕ್ರಮ ಮೆ.23 ರಂದು ನಡೆಯಿತು.


ಮೆ.15ರಂದು ಗೊನೆ ಕಡಿಯುವ ಮೂಲಕ ಆರಂಭಗೊಂಡು ಕಲಶ ಸ್ನಾನ,ಭಂಡಾರ ಶುದ್ದೀಕರಣ, ಹರಕೆ ಒಪ್ಪಿಸುವುದು,ಭಂಡಾರ ತೆಗೆಯುವುದು,ಮಾರಿಕ್ಕಳ ಪ್ರವೇಶ ಕಾರ್ಯಕ್ರಮ ನಡೆಯಿತು. ಮೆ.23 ರಂದು ಮಹಾಮ್ಮಾಯಿ ಅಮ್ಮನವರ ಹಾಗೂ ಪರಿವಾರ ದೈವಗಳಿಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.