ಎನ್ನೆಂಸಿ; ಮಾದಕ ದ್ರವ್ಯಗಳ ದುಷ್ಪರಿಣಾಮ ಕುರಿತು ಮಾಹಿತಿ

0


ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಹಾಗೂ ರೆಡ್‌ಕ್ರಾಸ್ ಘಟಕ ಇದರ ಜಂಟಿ ಆಶ್ರಮದಲ್ಲಿ 11.05.2024 ರಂದು ಮಾದಕ ದ್ರವ್ಯಗಳ ದುಷ್ಪರಿಣಾಮ ಬಗ್ಗೆ ಮಾಹಿತಿ ಮತ್ತು ಯುವಜನತೆಗೆ ಜಾಗೃತಿ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ರುದ್ರಕುಮಾರ್ ಎಂ ಎಂ ಪ್ರಾಂಶುಪಾಲರು, ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇವರು ವಹಿಸಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಸರಸ್ವತಿ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಸುಳ್ಯ ಇವರು ಟ್ರಾಫಿಕ್ ನಿಯಮ ಹಾಗೂ ಮಾದಕ ದ್ರವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಎನ್ಎಸ್ಎಸ್ ಘಟಕ ಅಧಿಕಾರಿಗಳಾದ ಶ್ರೀ ಸಂಜೀವ ಕುದ್ಪಾಜೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಘಟಕದ ಅಧಿಕಾರಿಗಳಾದ ಚಿತ್ರಲೇಖ ಕೆ.ಎಸ್ ಹಾಗೂ ನಾಯಕರಾದ ಪ್ರಸಾದ್, ಕೀರ್ತನ್, ದೀಪ್ತಿ, ರಕ್ಷಿತಾ ಉಪಸ್ಥಿತರಿದ್ದರು. ಚೈತ್ರ ಪ್ರಥಮ ಬಿಎಸ್ಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕವಿತಾ ಪ್ರಥಮ ಬಿಎಸ್ಸಿ ಸ್ವಾಗತಿಸಿ, ಶಿಲ್ಪ ದ್ವಿತೀಯ ಬಿಎಸ್ಸಿ ವಂದಿಸಿದರು.