ಕೂತ್ಕುಂಜ ಶಾಲೆಗೆ ನುಗ್ಗಿದ ಕಳ್ಳರು

0

ಕೂತ್ಕುಂಜ ಶಾಲೆಗೆ ನುಗ್ಗಿದ ಕಳ್ಳರು ಕಡತ ಚೆಲ್ಲಾಪಿಲ್ಲಿ- 1000 ರೂ. ನಗದು ಕಳವು


ಕೂತ್ಕುಂಜ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 1೦೦೦ ರೂ. ನಗದು ಕಳವು ಮಾಡಿದರೆಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಕಳ್ಳರು ನಿಗ್ಗಿದ್ದು, ಇಂದು ಬೆಳಿಗ್ಗೆ ಶಿಕ್ಷಕರು ಶಾಲೆಗೆ ಬಂದಾಗ ವಿಷಯ ತಿಳಿಯಿತು. ಶಾಲೆಯ 2 ಕೋಣೆಗಳ ಬೀಗಗಳನ್ನು ಮುರಿಯಲಾಗಿದೆ.

ಕಪಾಟಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಡ್ರವರ್‌ನಲ್ಲಿದ್ದ ರೂ. 1೦೦೦ ನಗದನ್ನು ಅಪಹರಿಸಲಾಗಿದೆ. ಶಾಲಾ ಶಿಕ್ಷಕರು ಸುಬ್ರಹ್ಮಣ್ಯ ಠಾಣೆಗೆ ಹೋಗಿ ದೂರು ನೀಡಿ ಬಂದಿದ್ದಾರೆ.